ಬೆಳ್ತಂಗಡಿ: ಸ್ಪಂದನಾ ಸೇವಾ ಸಂಘದ ವತಿಯಿಂದ ಚಿಕಿತ್ಸಾ ನೆರವು

ಬೆಳ್ತಂಗಡಿ: ಬೆಳ್ತಂಗಡಿ  ಸ್ಪಂದನಾ ಸೇವಾ ಸಂಘದ ಸೇವಾ ಯೋಜನೆಯ ಧನಸಹಾಯವನ್ನು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು ಅಕಸ್ಮಿಕ ರಿಕ್ಷಾ ಅಪಘಾತದಲ್ಲಿ ತೀವ್ರ ಗಾಯಗೊಂಡು ಸದ್ಯ ಚಿಕಿತ್ಸೆ ಪಡೆಯುತ್ತಿರುವ ಕಡಬ ತಾಲೂಕು ಸವಣೂರು ಪಟ್ಟೆಮನೆ ನಿವಾಸಿ ದಾಮೋದರ ಗೌಡ ಇವರಿಗೆ ಚಿಕಿತ್ಸಾ ಸಹಾಯಾರ್ಥವಾಗಿ ರೂ 15,000/- ದ ಚೆಕ್ಕನ್ನು ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಲಕ್ಷ್ಮೀನಾರಾಯಣ.ಕೆ ಇವರ ಮೂಲಕ ಫಲಾನುಭವಿಯ ಮನೆಯವರಿಗೆ  ಇತ್ತೀಚೆಗೆ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಸ್ಪಂದನಾ ಸೇವಾ ಸಂಘದ ಸಂಚಾಲಕ ಮೋಹನ್ ಗೌಡ ಕೊಯ್ಯೂರು, ಸೀತಾರಾಮ್ ಬೆಳಾಲು, ವಾಣಿ ಸೌಹಾರ್ದ ಕೋ-ಅಪರೇಟೀವ್ ಸೊಸೈಟಿ ಇದರ ನಿರ್ದೇಶಕ ಸುರೇಶ್ ಕೌಡಂಗೆ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಧನಂಜಯ ಗೌಡ, ಸಿಬ್ಬಂದಿಗಳಾದ ಉಮೇಶ್ ಗೌಡ, ನಿತೇಶ್ ಹುಣ್ಸೆಕಟ್ಟೆ, ತಾಲೂಕು ಮಹಿಳಾ ವೇದಿಕೆಯ ಮಾಜಿ ಕಾರ್ಯದರ್ಶಿ  ಉಮಾವತಿ.ಎಸ್ ಗೌಡ,  ನೂತನ ಬೆಳಾಲು ಮತ್ತು ಸ್ಪಂದನಾ ಸೇವಾ ಸಂಘದ ಸದಸ್ಯರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.