ಪುಂಜಾಲಕಟ್ಟೆ: ಪಿಲಾತಬೆಟ್ಟು ಗ್ರಾಮದ ಮಿತ್ತಬೆಟ್ಟು ಶ್ರೀ ಮಹಾಮ್ಮಾಯಿ ವನದುರ್ಗ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಪೂಜೆ ಮಹೋತ್ಸವಕ್ಕೆ ಮಾಜಿ ಶಾಸಕ ವಸಂತ ಬಂಗೇರ ಮೇ.11 ರಂದು ಆಗಮಿಸಿ ಪ್ರಸಾದವನ್ನು ಸ್ವೀಕರಿಸಿದರು.
ವಸಂತ ಬಂಗೇರರವರನ್ನು ಸಮಿತಿಯ ಪರವಾಗಿ ಶಾಲು ಹೊದಿಸಿ ಫಲ ಪುಷ್ಪ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಾಲಯ್ಯ ಹೆಗ್ಡೆ, ದಿನೇಶ್ ಹೆಗ್ಡೆ , ಎನ್ ಮೋಹನ್ ಹೆಗ್ಡೆ, ಬಿ ನಿತ್ಯಾನಂದ ಹೆಗ್ಡೆ ಸುಪದ್ಮ ಕೊಲ್ಪೆದ ಬೈಲು, ಸುಂದರ್ ರಾಜ್ ಹೆಗ್ಡೆ, ಸಂಜೀವ ಹೆಗ್ಡೆ ಉಜಿರೆ, ವಸಂತ ಹೆಗ್ಡೆ, ಸುರೇಶ್ ಹೆಗ್ಡೆ ಪುಂಜಾಲಕಟ್ಟೆ, ಉಮೇಶ್ ಆಚಾರ್ಯ, ಉದಯ ಕುಮಾರ್ ಜೈನ್, ವಸಂತ ಕುಮಾರ್ ಜೈನ್, ದಿಲೀಪ್ ಕುಮಾರ್ ಜೈನ್ ಕಟ್ಟೆಮನೆ, ಶೈಲೇಶ್ ಕುಮಾರ್ ಕುರ್ತೋಡಿ, ಅಬ್ದುಲ್ ರಹಿಮಾನ್ ಪಡ್ಪು ಸೇರಿದಂತೆ ಹಲವಾರು ಸಮಾಜ ಮುಖಂಡರು ಉಪಸ್ಥಿತರಿದ್ದರು.