ಲಾಯಿಲ: ಜ್ಯೋತಿ ಆಸ್ಪತ್ರೆಯಲ್ಲಿ ಆಧುನಿಕ ಹಾಗು ಸುಸಜ್ಜಿತ ವ್ಯವಸ್ಥೆಗಳನ್ನು ಹೊಂದಿರುವ ಅನೇಸ್ದೆಷ್ಯಾ ಉಪಕರಣ ಹಾಗು ಶಸ್ತ್ರಚಿಕಿತ್ಸಾ ಟೇಬಲ್ ನ್ನು ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ವಂ. ಫಾ| ಲೋರನ್ ಮುಕ್ಕುಝಿ ಯವರು ಆಶೀರ್ವದಿಸಿ ಸಾರ್ವಜನಿಕರ ಉಪಯೋಗಕ್ಕಾಗಿ ಮೇ.13 ರಂದು ಅನಾವರಣಗೊಳಿಸಿದರು.
ಈ ಉಪಕರಣದಿಂದ ಅತ್ಯಂತ ಕಷ್ಟಕರವಾದ ಶಸ್ತ್ರಚಿಕಿತ್ಸೆಗಳಾದ ಕುತ್ತಿಗೆ ಮತ್ತು ತಲೆ, ಕೀಲು ಮತ್ತು ಎಲುಬು, ಕ್ಯಾನ್ಸರ್ ಶಸ್ತ್ರಚಿಕಿತ್ಸೆ, ಮೊಣಕಾಲು ಬದಲಿ ಚಿಕಿತ್ಸೆ ,ಬಹು ಉದ್ದೇಶಿತ ಸಿ- ಆರ್ಮ್ ಉಪಕರಣ ಮತ್ತು ಸಾಮಾನ್ಯ ಶಸ್ತ್ರ ಚಿಕಿತ್ಸೆಗಳನ್ನು ಮಾಡಲಾಗುವುದು.