ಕಡಿರುದ್ಯಾವರ: ರೂ.1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಡಿರುದ್ಯಾವರ ಗ್ರಾಮದ ಕುಚ್ಚೂರುಬೈಲು ಎಂಬಲ್ಲಿ ಶ್ರೀ ವನದುರ್ಗಾದೇವಿ ನೂತನ ದೇವಸ್ಥಾನಕ್ಕೆ ಹಾಗೂ ಪರಿವಾರ ದೈವ ದೇವರುಗಳ ಸ್ಥಾನಕ್ಕೆ ವೇದಮೂರ್ತಿ ನೀಲೇಶ್ವರ ಆಲಂಬಾಡಿ ಶ್ರೀ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಮೇ.13 ರಂದು ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮವನ್ನು ಸೂರಜ್ ಅಡೂರು ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಎಂಎಲ್ಸಿ ಪ್ರತಾಪ್ಸಿಂಹ ನಾಯಕ್ ವಹಿಸಿದರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶರತ್ಕೃಷ್ಣ ಪಡ್ವೆಟ್ನಾಯ ಹಾಗೂ ಆಲಂಬಾಡಿ ಪದ್ಮನಾಭ ತಂತ್ರಿ ಶಿಲಾನ್ಯಾಸ ನೆರವೇರಿಸಿದರು. ಮುಂಡಾಜೆ ಕಿರ್ತನಾ ಕಲಾ ತಂಡದ ಸಂಚಾಲಕ ಸದಾನಂದ ಧಾರ್ಮಿಕ ಉಪನ್ಯಾಸ ಗೈದರು.
ಮುಖ್ಯ ಅತಿಥಿಗಳಾಗಿ ಕಡಿರುದ್ಯಾವರ ಗ್ರಾ.ಪಂ. ಅಧ್ಯಕ್ಷ ಅಶೋಕ್ ಕುಮಾರ್, ಧರ್ಮಸ್ಥಳ ಗ್ರಾ. ಯೋಜನೆಯ ಮೇಲ್ವಿಚಾರಕರಾದ ಜನಾರ್ದನ, ಕಾಟಾಜೆ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಪ್ರಧಾನ ಅರ್ಚಕ ಪ್ರೇಮಾನಂದ ಫಡಕೆ, ಕಾಟಾಜೆ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಅಧ್ಯಕ್ಷ ಎ. ಜಯದೇವ್, ಮಂಜುನಾಥ ಕಾಮತ್, ಗ್ರಾ.ಪಂ. ಸದಸ್ಯೆ ರತ್ನಾವತಿ ಬಾಲಕೃಷ್ಣ ಗೌಡ, ಕಡಿರುದ್ಯಾವರ ಮಾಜಿ ಗ್ರಾ.ಪಂ ಅಧ್ಯಕ್ಷೆ ವನಿತಾ ಸಾಲಿಯಾನ್, ವರದಾ ಹೇಡ್ಯ, ಬಂಗಾಡಿ ಸಿ.ಎ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್ ಲಕ್ಷ್ಮಣ ಗೌಡ, ವಿಘ್ನೇಶ್ ಪ್ರಭು ಆಲಂತಡ್ಕ, ಉಜಿರೆ ಸಾಂಘವಿ ಕನ್ಸ್ಟ್ರಕ್ಷನ್ ಮಾಲಕ ರಾಜೇಂದ್ರ ಇಂಜಿನಿಯರ್, ಮಾಜಿ ಯೋಧ ಯತೀಂದ್ರ ಪೂಜಾರಿ ಕಡಿರುದ್ಯಾವರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಂಗಾಡಿ ಸಿ.ಎ ಬ್ಯಾಂಕ್ ನಿರ್ದೇಶಕ ಆನಂದ ಗೌಡ ಬರೆಮೇಲು, ಕಡಿರುದ್ಯಾವರ ಗ್ರಾ.ಪಂ ಸದಸ್ಯರಾದ ರಾಜೇಶ್ ಗೌಡ, ಸೂರಜ್ ವಳಂಬ್ರ, ಕುಚ್ಚೂರು ಕಾರ್ಯದರ್ಶಿ ಮಂಜುನಾಥ ಗೌಡ, ಕುಚ್ಚೂರು ಜೊತೆಕಾರ್ಯದರ್ಶಿ ಧರ್ಣಪ್ಪ ಗೌಡ ಶೆಟ್ಟಿ , ಕುಚ್ಚೂರು ಕೋಶಾಧಿಕಾರಿ ಪ್ರಸಾದ್ ಗೌಡ, ಉಪಾಧ್ಯಕ್ಷ ಬಾಬು ನಾಯಕ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಶ್ರೀ ವನದುರ್ಗಾ ದೇವಿ ಸನ್ನಿಧಿ ಅಭಿವೃದ್ಧಿ ಅಧ್ಯಕ್ಷೆ ಲೋಕೇಶ್ವರಿ ವಿನಯಚಂದ್ರ ಸ್ವಾಗತಿಸಿ, ಜನಾರ್ದನ ನಿರೂಪಿಸಿದರು. ಭಾರತೀ ಹೆಬ್ಬಾರ್ ಧನ್ಯವಾದವಿತ್ತರು