ಕುತ್ಲೂರು : ಮಂಜುಶ್ರೀ ಭಜನಾ ಮಂಡಳಿ, ಸಭಾಭವನ ನಿರ್ಮಾಣ ಸಮಿತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂಧು ಮತ್ತು ಸ್ವ ಸಹಾಯ ಸಂಘಗಳ ಒಕ್ಕೂಟ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮತ್ತು ಮಂಜುಶ್ರಿ ಸಭಾಭವನ ಉದ್ಘಾಟನೆ ಸಮಾರಂಭ ಮೇ.10ರಂದು ಜರಗಿತು.
ಸಭಾಭವನ ಉದ್ಘಾಟನೆಯನ್ನು ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯಾವರು ಉದ್ಘಾಟಿಸಿ ಆಶೀರ್ವಚನ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಹಣಾಧಿಕಾರಿ ಎಲ್ ಹೆಚ್ ಮಂಜುನಾಥ್, ದ.ಕ.ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವೇಂದ್ರ ಹೆಗ್ಡೆ , ನಿವೃತ್ತ ವಾಯು ಸೇನಾ ಅಧಿಕಾರಿ ರಾಘವೇಂದ್ರ ಭಟ್, ಭಾ. ಜ.ಪಾ.ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಆಶಾಲತಾ, ನಾರಾವಿ ಪ್ರಾ. ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಭಂಡಾರಿ, ವಕೀಲರಾದ ಮುರಳಿ ಬಿ. ಸಭಾ ಭವನ ನಿರ್ಮಾಣ ಸಮಿತಿ ಅಧ್ಯಕ್ಷ ಕೆ. ಶಶಿಕಾಂತ್ ಅರಿಗ ಅಧ್ಯಕ್ಷತೆ ವಹಿಸಿದ್ದರು. ರಾಮಚಂದ್ರ ಭಟ್,
ಎಂ ಎನ್ ರಾಜು ಗೋಪಾಲ್, ರಾಧಾಕೃಷ್ಣ, ಕೇಶವ ಪೂಜಾರಿ, ಸತೀಶ್ ಪಡಿವಾಲ್ , ಕರಿಯ ಪೂಜಾರಿ, ಶ್ರೀಮತಿ ದಮಯಂತಿ, ಅಣ್ಣಿ ಎಂ. ಕೆ. ಮೊದಲಾದವರು ಉಪಸ್ಥಿತರಿದ್ದರು.