ಬೆಳ್ತಂಗಡಿ: 14.2 ಕೆಜಿ ತೂಕದ ಗೃಹ ಬಳಕೆಯ ಎಲ್ ಪಿ ಜಿ ಸಿಲಿಂಡರ್ ನ ಬೆಲೆಯನ್ನು 50 ರೂಪಾಯಿ ಏರಿಕೆ ಮಾಡಲಾಗಿದ್ದು ಅನಿಲ ಸಿಲಿಂಡರ್ ದರ 1,000 ರೂಪಾಯಿ ಆಗಿದೆ.
ಈ ಹಿಂದೆ ಗೃಹಬಳಕೆಯ ಅಡುಗೆ ಅನಿಲದ ದರವನ್ನು ಪ್ರತಿ ಸಿಲಿಂಡರ್ ಗೆ 50ರೂಗಳಷ್ಟು ಹೆಚ್ಚಿಸಿ 950 ರೂ ಗೆ ಏರಿಕೆ ಮಾಡಲಾಗಿತ್ತು. ಇದೀಗ ಮತ್ತೆ ಒಂದು ತಿಂಗಳು ಕಳೆಯುವಷ್ಟರಲ್ಲಿ 50 ರೂ ಏರಿಕೆ ಮಾಡಲಾಗಿದೆ. ಈ ಮೂಲಕ ಅಡುಗೆ ಅನಿಲ ಸಿಲಿಂಡರ್ ದರ ಭರ್ತಿ 1,000ರೂ ಮುಟ್ಟಿದೆ.