ಬೆಳ್ತಂಗಡಿ: ಶಿವರಾಮ ಕಾರಂತ ಪ್ರತಿಷ್ಠಾನ ಮೂಡುಬಿದಿರೆ ಇವರ ಸಹಯೋಗದಲ್ಲಿ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ತು , ಬೆಳ್ತಂಗಡಿ ತಾಲೂಕು ಸಾಹಿತ್ಯ ಪರಿಷತ್ತು , ಸುವಣ೯ ಪ್ರತಿಷ್ಠಾನ ಬೆಳ್ತಂಗಡಿ ಇವರ ಸಹಯೋಗದಲ್ಲಿ 2021ರ ಇಬ್ಬರು ಹಿರಿಯ ಸಾಹಿತಿಗಳಿಗೆ ‘ ಶಿವರಾಮ ಕಾರಂತ ಪ್ರಶಸ್ತಿ ಮತ್ತು ಐದು ಮಂದಿ ಸಾಹಿತಿಗಳಿಗೆ ಶಿವರಾಮ ಕಾರಂತ ಪುರಸ್ಕಾರ’ ಪ್ರದಾನ ಸಮಾರಂಭ ಎ.29 ರಂದು ಸಪ್ತ ವಣ೯ ಸಭಾ ಭವನದಲ್ಲಿ ಜರುಗಿತು.
ಕಾಯ೯ಕ್ರಮವನ್ನು ಮಂಗಳೂರು ವಿ.ವಿ.ಯ ಕುಲಪತಿ ಪ್ರೋ. ಪಿ.ಯಸ್ ಯಡಪಡಿತ್ತಾಯ ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾಯ೯ಕ್ರಮದ ಅಧ್ಯಕ್ಷತೆಯನ್ನು ಶಿವರಾಮ ಕಾರಂತ ಪ್ರತಿಷ್ಠಾನ ಮೂಡಬಿದ್ರೆ ಇದರ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಅಮರನಾಥ ಶೆಟ್ಟಿ ಅವರು ವಹಿಸಿದ್ದರು.
2021ರ ಶಿವರಾಮ ಕಾರಂತ ಪ್ರಶಸ್ತಿಯನ್ನು ಹಿರಿಯ ಸಾಹಿತಿಗಳಾದ ಪ್ರೊಫೆಸರ್ ಬಿ. ಎ. ವಿವೇಕ ರೈ, ಮಂಗಳೂರು ಮತ್ತು ಡಾ| ಕುಂ. ವೀರಭದ್ರಪ್ಪ ಬಳ್ಳಾರಿ ಇವರಿಗೆ, ಹಾಗೂ 2021ರ ಶಿವರಾಮ ಕಾರಂತ ಪುರಸ್ಕಾರವನ್ನು ಸಾಹಿತಿಗಳಾದ ಡಾ| ಮಹಾಬಲೇಶ್ವರ ರಾವ್ (ಕೃತಿ : ಕೈ ಹಿಡಿದು ನಡೆಸಬೇಕೆ?), ಡಾ| ಗಜಾನನ ಶರ್ಮ (ಕೃತಿ : ಚೆನ್ನಾಭೈರಾದೇವಿ), ಡಾ| ವಿಕ್ರಮವಿಸಾಜಿ (ಕೃತಿ : ಪಠ್ಯದ ಭವಾವಳಿ), ಪ್ರೊ. ಜಯಪ್ರಕಾಶ ಗೌಡ (ಸಂಸ್ಕೃತಿ ಪೋಷಕರು), ವೈ. ಎ. ದಂತಿ (ಸಂಸ್ಕೃತಿ ಪೋಷಕರು) ಇವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಶ್ರೀಮತಿ ಭಾನುಮತಿ ಶೀನಪ್ಪ, ಶ್ರೀ ಪತಿ ಭಟ್ ಮೂಡಬಿದ್ರೆ, ಬಾಹುಬಾಲಿ ಪ್ರಸಾದ್ ಉಪಸ್ಥಿತರಿದ್ದರು.
ಅಂಜನಾ ಮತ್ತು ಕೀತ೯ನಾ ಇವರ ಪ್ರಾಥ೯ನೆ ಬಳಿಕ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಶ್ರೀನಾಥ್ ಸ್ವಾಗತಿಸಿದರು. ಪ್ರತಿಷ್ಠಾನ ದ ಪ್ರಧಾನ ಕಾರ್ಯದರ್ಶಿ ಡಾ. ಜಯಪ್ರಕಾಶ್ ಮಾವಿನಕುಳಿ ಕಾಯ೯ಕ್ರಮ ನಿರೂಪಿಸಿದರು.