ಪಟ್ರಮೆ ಗ್ರಾ.ಪಂ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಪಟ್ರಮೆ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ನಿರ್ದೇಶನದಂತೆ, ಗ್ರಾಮ ಪಂಚಾಯತ್ ವ್ಯಾಪ್ತಿಯನ್ನು ಬಯಲು ಕಸ ಮುಕ್ತ ಗ್ರಾಮವನ್ನಾಗಿಸುವ ಆಶಯದಂತೆ  ಎ.22ರಂದು ಸೂರ್ಯತ್ತವು ಇಂದ ಅನಾರು ದೇವಸ್ಥಾನದವರೆಗೆ ಒಂದು ತಂಡ ಹಾಗೂ ಪಟ್ರಮೆ ಗ್ರಾಮ ಪಂಚಾಯತ್ನಿಂದ ಅನಾರು ದೇವಸ್ಥಾನದವರೆಗೆ ಇನ್ನೊಂದು ತಂಡವಾಗಿ, ಒಟ್ಟು 2 ತಂಡಗಳ ಮೂಲಕ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು , ಸದಸ್ಯರ ಮುಂದಾಳತ್ವದಲ್ಲಿ ಹಾಗೂ ಮಾರ್ಗದರ್ಶಿ ಅಧಿಕಾರಿಯಾದ ಡಾ.ಜಯಕೀರ್ತಿ ಜೈನ್ ಅವರ ಮಾರ್ಗದರ್ಶನದಲ್ಲಿ ರಸ್ತೆ ಬದಿ ಕಸವನ್ನು ಸ್ವಚ್ಚಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಮೂಲಕ ಗ್ರಾಮಸ್ಥರಿಗೆ ಹಾಗೂ ಸ್ಥಳೀಯ ವರ್ತಕರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಹಾಗೂ ಅರಿವು ಮೂಡಿಸುವ ಕೆಲಸ ಮಾಡಲಾಯಿತು.

ಈ ಕಾರ್ಯದಲ್ಲಿ ಗ್ರಾಮ ಪಂಚಾಯತ್ ಪಿಡಿಒ, ಕಾರ್ಯದರ್ಶಿ, ಸಿಬ್ಬಂದಿವರ್ಗ , ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಸಂಜೀವಿನಿ ಒಕ್ಕೂಟದ ಸದಸ್ಯರು, ಆರೋಗ್ಯ ಇಲಾಖೆಯ ಸಹಾಯಕರು,ಗ್ರಾಮಸ್ಥರು ಭಾಗವಹಿಸಿದ್ದರು.

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.