ಬೆಳ್ತಂಗಡಿ: ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ಎ.10 ರಂದು ಜರುಗಿದ ಲಯನ್ಸ್ ಜಿಲ್ಲಾ ಸಮಾವೇಶದಲ್ಲಿ ಜಿಲ್ಲಾ ರಾಜ್ಯಪಾಲರಾಗಿ ಚುನಾಯಿತರಾದ ಲಯನ್ ಸಂಜೀತ್ ಶೆಟ್ಟಿ ಸಕಲೇಶಪುರ ಇವರು ವಸಂತ್ ಶೆಟ್ಟಿ ಇವರನ್ನು ಪ್ರಾಂತೀಯ ಅಧ್ಯಕ್ಷರಾಗಿ ಆಯ್ಕೆ ಮಾಡಿದರು.
ಇವರ ಲಯನ್ಸ್ ಸೇವಾ ಅವಧಿಯು 2022 ಜೂನ್ ತಿಂಗಳಿನಿಂದ 2023ರ ಜೂನ್ ರವರೆಗೆ ಇರುತ್ತದೆ.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆ ಗಳನ್ನು ಒಳಗೊಂಡ ಲಯನ್ಸ್ ಜಿಲ್ಲೆ 317 ಡಿ ಯ ಸುಮಾರು 1500 ಸದಸ್ಯರು ಜಿಲ್ಲಾ ಸಮ್ಮೇಳನದಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್ಬಿನಿಂದ ಅಧ್ಯಕ್ಷ ಹೇಮಂತ್ ರಾವ್ ಏರ್ಡೂರು, ಕಾರ್ಯದರ್ಶಿ ಅನಂತಕೃಷ್ಣ, ಕೋಶಾಧಿಕಾರಿ ದತ್ತಾತ್ರಯ, ಆರ್. ಸಿ. ಧರನೇಂದ್ರ ಜೈನ್, ಪೂರ್ವಾಧ್ಯಕ್ಷ ವಿಶ್ವನಾಥ್ ನಾಯಕ್, ಪ್ರಕಾಶ್ ಶೆಟ್ಟಿ ನೊಚ್ಚ, ರಾಮಕೃಷ್ಣ ಗೌಡ, ನಿಯೋಜಿತ ಅಧ್ಯಕ್ಷ ಡಾ. ದೇವಿಪ್ರಸಾದ್ ಬೊಲ್ಮ ಜಿಲ್ಲಾ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.