ಬೆಳ್ತಂಗಡಿ: ಎಸ್.ಕೆ ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಸಂಸ್ಥೆಯ ಗುರುವಾಯನಕೆರೆ ಶಾಖೆಯೂ ಬೆಳ್ತಂಗಡಿಯ ಸಂತೆಕಟ್ಟೆಗೆ ಸ್ಥಳಾಂತರಗೊಂಡ ಹಿನ್ನೆಲೆಯಲ್ಲಿ ನೂತನ ಶಾಖೆಗೆ ಶಾಸಕ ಹರೀಶ್ ಪೂಂಜ ರವರು ಮಾ.26 ರಂದು ಭೇಟಿ ನೀಡಿ ಶುಭ ಹಾರೈಸಿದರು.
ಬ್ಯಾಂಕಿನ ಆಡಳಿತ ಮಂಡಳಿಯವರು ಆತ್ಮೀಯವಾಗಿ ಶಾಸಕರನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರು ಮಂಜುನಾಥ್ ಆಚಾರ್ಯ, ಸಂಸ್ಥೆಯ ಶಾಖಾ ವ್ಯವಸ್ಥಾಪಕರಾದ ಗೋಪಾಲಕೃಷ್ಣ ಭಟ್ ಕೆ , ಸಿಬ್ಬಂದಿಗಳಾದ ರಾಮ್ ಪ್ರಸಾದ್ ಎನ್ ಎಸ್, ಸುಶಾಂತ್ , ಪ್ರಶಾಂತ್ ಎ ಆರ್, ವಿಶ್ವಕರ್ಮಾಭ್ಯುದಯ ಸಭಾ(ರಿ.) ಬೆಳ್ತಂಗಡಿ ಇದರ ಕಾರ್ಯದರ್ಶಿ ಗಣೇಶ್ ಆಚಾರ್ಯ ಬಲ್ಯಾಯಕೋಡಿ, ಹಾಗೂ ಪದಾಧಿಕಾರಿಗಳು, ವಿಶ್ವಕರ್ಮ ಯುವ ಮಿಲನ್ (ರಿ.) ಪದಾಧಿಕಾರಿ ಗಣೇಶ್ ಆಚಾರ್ಯ ಮುಂಡೂರು, ಮತ್ತು ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘ ಬೆಳ್ತಂಗಡಿ ಇದರ ಕಾರ್ಯದರ್ಶಿಗಳಾದ ಪುಷ್ಪಾ ಗಣೇಶ್ ಮತ್ತಿತ್ತರು ಉಪಸ್ಥಿತರಿದ್ದರು.