ಪಡಂಗಡಿ: ಹಾಲು ಉತ್ಪಾದಕರ ಸಹಕಾರ ಸಂಘ ಚುನಾವಣೆ: ಅವಿರೋಧ ಆಯ್ಕೆ

ಪಡಂಗಡಿ: ಇಲ್ಲಿಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಮಾ.25 ರಂದು ಚುನಾವಣೆ ನಡೆಯಬೇಕಿತ್ತು. ಮಾ.19 ರಂದು ನಾಮಪತ್ರ ಪರಿಶೀಲನೆ ವೇಳೆ 13 ಸ್ಥಾನಕ್ಕೆ 13 ಜನರ ನಾಮಪತ್ರ ಸಲ್ಲಿಕೆಯಾದ್ದರಿಂದ 13 ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಣೆ ಮಾಡಿದರು.
ಸಾಮಾನ್ಯ ಸ್ಥಾನದಿಂದ ಕುಂಞಪ್ಪ ಮೂಲ್ಯ, ಜಯರಾಜ ಬಿ., ಮೆಕ್ಸಿಮ್ ಸಿಕ್ವೇರಾ, ವಸಂತ ಪೂಜಾರಿ ಪಿ, ಶ್ರೀಧರ ಪೂಜಾರಿ, ಕೆ. ಸುಬ್ರಹ್ಮಣ್ಯ ಭಟ್, ಸುಂದರ ಪೂಜಾರಿ, ಹಿಂದುಳಿದ ಪ್ರವರ್ಗ ಎ ಮೀಸಲು ಸ್ಥಾನದಿಂದ ದೇಜಪ್ಪ ಮೂಲ್ಯ, ಹಿಂದುಳಿದ ಪ್ರವರ್ಗ ಬಿ ಮೀಸಲು ಸ್ಥಾನದಿಂದ ಬಾಝಿಲ್ ಫೆರ್ನಾಂಡಿಸ್, ಮಹಿಳಾ ಮೀಸಲು ಸ್ಥಾನದಿಂದ ಅಮಿತಾ ಮತ್ತು ಶ್ವೇತಾ, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಪ್ರಸಾದ್ ಮತ್ತು ಅಣ್ಣು ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.