ಕಾಶಿಪಟ್ಣ ಸ.ಪ್ರೌ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸುಧಾಕರ್ ಆಚಾರ್‌ರವರಿಗೆ ಬೀಳ್ಕೊಡುಗೆ ಸಮಾರಂಭ

ಕಾಶಿಪಟ್ಣ: ಇಲ್ಲಿನ ಸರಕಾರಿ ಪ್ರೌಢಶಾಲೆಗೆ 14 ವರ್ಷಗಳ ಹಿಂದೆ ಮೊದಲ ದೈಹಿಕ ಶಿಕ್ಷಣ ಶಿಕ್ಷಕರಾಗಿ ನೇಮಕಗೊಂಡು ಅಲ್ಪಕಾಲದಲ್ಲೇ ಅದೆಷ್ಟೋ ಹಳ್ಳಿಯ ಕ್ರೀಡಾ ಪ್ರತಿಭೆಗಳನ್ನು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಿಂಚುವಂತೆ ಮಾಡಿದ ದೈಹಿಕ ಶಿಕ್ಷಣ ಶಿಕ್ಷಕ ಸುಧಾಕರ್ ಆಚಾರ್ ಇವರು ಉಡುಪಿ ಜಿಲ್ಲೆಯ ವಡ್ಡೆರ್ಸೆ ಪ್ರೌಢಶಾಲೆಗೆ ವರ್ಗಾವಣೆಗೊಂಡಿದ್ದಾರೆ.

ಇವರಿಗೆ  ಕಾಶಿಪಟ್ಣ ಗ್ರಾಮ ಪಂಚಾಯತ್, ಎಸ್ ಡಿಎಂಸಿ ಸಮಿತಿ ಮತ್ತು ಶಿಕ್ಷಕರ ವೃಂದ ಸರ್ಕಾರಿ ಪ್ರೌಢ ಶಾಲೆ ಕಾಶಿಪಟ್ಣ ಇವರಿಂದ ಬೀಳ್ಕೊಡುಗೆ ಸಮಾರಂಭ  ಇತ್ತೀಚೆಗೆ ನಡೆಯಿತು.

ಮುಖ್ಯ ಅತಿಥಿಯಾಗಿ ಗೇರುಕಟ್ಟೆ ಸರಕಾರಿ ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಭಾಗವಹಿಸಿದ್ದರು.

ವೇದಿಕೆಯಲ್ಲಿ ಕಾಶಿಪಟ್ಣ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕೆ.ಕಾಶಿಪಟ್ಣ, ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಪಿ.ಕೆ.ರಾಜು ಪೂಜಾರಿ, ಮರೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪದ್ಮಶ್ರೀ ಜೈನ್, ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ ಪದ್ಮಿನಿ, ಪಂಚಾಯತ್ ಮಾಜಿ ಸದಸ್ಯ ಪ್ರವೀಣ್ ಪಿಂಟೋ, ಎಸ್ ಡಿಎಂಸಿ ಸದಸ್ಯರಾದ ಧರ್ಣಪ್ಪ, ಯಶೋಧರ ಪೂಜಾರಿ, ಸುಜಾತಾ ಮತ್ತು ಸುನೀಲ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.