ಉಜಿರೆ : ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಷನ್ ಕ್ಷೇತ್ರ ಸಮಿತಿ ಬೆಳ್ತಂಗಡಿ-ಉಜಿರೆ ವತಿಯಿಂದ ಟೈಲರ್ಸ್ ದಿನಾಚರಣೆಯನ್ನು ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಬಳಿ ಇರುವ ಮೈದಾನದಲ್ಲಿ ಆಚರಿಸಲಾಯಿತು.
ಕ್ಷೇತ್ರ ಸಮಿತಿ ಹಾಗೂ ವಲಯ ಸಮಿತಿಗಳ ಉಪಸ್ಥಿತಿಯಲ್ಲಿ ಹಿರಿಯರಾದ ಚಂದ್ರ ಟೈಲರ್ ರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಉಜಿರೆ ವಲಯದ ಅಧ್ಯಕ್ಷೆ ವೇದಾವತಿ ಜನಾರ್ದನ್, ಕಾರ್ಯದರ್ಶಿ ರೂಪ ಜಗದೀಶ್, ಕೋಶಾಧಿಕಾರಿ ಶುಭಲತ, ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕುಶಾಲಪ್ಪ ಗೌಡ, ಕ್ಷೇತ್ರ ಸಮಿತಿಯ ಅಧ್ಯಕ್ಷ ರಾಘವ ಪುತ್ರನ್, ಪ್ರಧಾನ ಕಾರ್ಯದರ್ಶಿ ನಾಗೇಶ್ ಕುಮಾರ್, ಕೋಶಾಧಿಕಾರಿ ಜಯಾ ಚಿದಾನಂದ್, ಜಿಲ್ಲಾ ಸಮಿತಿಯ ಸದಸ್ಯರಾದ ವಸಂತ್ ಸ್ವಾತಿ ಟೈಲರ್, ಶಾಂಭವಿ ಪಿ ಬಂಗೇರ, ರಾಜು ಪೂಜಾರಿ, ಬೆಳ್ತಂಗಡಿ ವಲಯದ ಅಧ್ಯಕ್ಷ ಸುರೇಂದ್ರ ಕೋಟ್ಯಾನ್, ಉಜಿರೆ ವಲಯದ ಸದಸ್ಯರಾದ ವಿಠಲ ಹಾಗೂ ಜಿಲ್ಲಾ ಕ್ಷೇತ್ರ ವಲಯದ ಎಲ್ಲಾ ಸದಸ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ 9 ವಲಯದ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು ಹಾಗೂ ಇದೇ ವೇಳೆ 9 ವಲಯದಿಂದ ಹಿರಿಯ ಟೈಲರ್ ವೃತ್ತಿ ಬಾಂಧವರನ್ನು ಹಾಗೂ ಜಿಲ್ಲಾ ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು