ನನ್ನ ಮೇಲೆ ಮಾನಹಾನಿ ಹೇಳಿಕೆ ನೀಡಿರುವ ಮಾಜಿ ಶಾಸಕ ವಸಂತ ಬಂಗೇರರು, ಯಾವುದೇ ಪವಿತ್ರ ಕ್ಷೇತ್ರಕ್ಕೆ ಆಣೆ ಪ್ರಮಾಣಕ್ಕೆ ಬರಲಿ-ಭಾಸ್ಕರ್ ಧರ್ಮಸ್ಥಳ

ಬೆಳ್ತಂಗಡಿ: ಇತ್ತೀಚೆಗೆ ನನ್ನ ತಮ್ಮ ಒಬ್ಬ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ಅಪವಾದ ಇದೆ ಮತ್ತು ಇನ್ನಿತರ ವಿಚಾರಗಳ ಬಗ್ಗೆ ಮಾಜಿ ಶಾಸಕ ವಸಂತ ಬಂಗೇರರು ನನ್ನ ಮೇಲೆ ಗೋಸಾಗಾಟ, ಮರ ಸಾಗಾಟ, ಮರಳು ದಂಧೆ ಮಾಡಿ ಹಣ ಮಾಡುತ್ತಿದ್ದು, ಗೋಮಾಂಸ ತಿನ್ನುತ್ತಾರೆ ಎಂದು ಮಾಧ್ಯಮಗಳ ಮೂಲಕ ಮಾನಹಾನಿಕರ ಹೇಳಿಕೆ ನೀಡಿರುತ್ತಾರೆ. ಈ ಹೇಳಿಕೆ ನೀಡಿರುವುದು ನಿಜ ಎಂದು ಆದರೆ ಅವರು ದೈವ ದೇವರುಗಳನ್ನು ನಂಬುವವರಾಗಿದ್ದರೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಥವಾ ಕಾಣತ್ತೂರಿಗೆ ಅಥವಾ ಕೊರಗಜ್ಜನ ಮೂಲ ಕ್ಷೇತ್ರ ಕುತ್ತಾರಿಗೆ ಆಣೆ ಪ್ರಮಾಣಕ್ಕೆ ಬರಲಿ, ಇದು ಆಗದಿದ್ದರೆ ಅವರು ಹೇಳಿದ ಯಾವುದೇ ಸ್ಥಳಕ್ಕೆ ನನ್ನ ಕುಟುಂಬ ಸಮೇತ ಆಣೆ ಪ್ರಮಾಣಕ್ಕೆ ಬರಲು ಸಿದ್ಧ ಎಂದು ಬಜರಂಗದಳ ಜಿಲ್ಲಾ ಸಂಚಾಲಕ ಭಾಸ್ಕರ ಧರ್ಮಸ್ಥಳ ಹೇಳಿದರು.

ಅವರು ಮಾ.3 ರಂದು ಬೆಳ್ತಂಗಡಿಯ ವಿಶ್ವ ಹಿಂದೂ ಪರಿಷತ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಮಾಜಿ ಶಾಸಕ ವಸಂತ ಬಂಗೇರರು ಹಿರಿಯ ರಾಜಕೀಯ ನಾಯಕರಾಗಿದ್ದು, ಪ್ರಥಮ ಬಾರಿಗೆ ಶಾಸಕರಾಗಿದ್ದ ಸಂದರ್ಭ ಮತ್ತು ಎರಡನೇ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿದ್ದಾಗ ಮತ ಕೊಟ್ಟು ಅವರಿಗೆ ಗೌರವ ಕೊಟ್ಟಿದ್ದೇನೆ. ಆದರೆ ಅವರು ಈ ರೀತಿಯಾಗಿ ಹೇಳಿಕೆ ನೀಡಿರುವುದು ಸರಿಯಲ್ಲ. ಇತ್ತೀಚೆಗೆ ಕನ್ಯಾಡಿಯಲ್ಲಿ ನಡೆದ ಘಟನೆ ಆಕಸ್ಮಿಕವಾಗಿದ್ದು, ದಿನೇಶ್ ಅವರ ಸಾವಿಂದ ನನಗೆ ದುಖಃವಾಗಿದೆ. ದಿನೇಶ್ ಅವರಿಗೆ ಮೊದಲು ನನ್ನ ಮನೆಯಲ್ಲಿ ಆಶ್ರಯ ಕೊಟ್ಟು ಗೌರವದಿಂದ ನೋಡಿಕೊಂಡಿದ್ದೇನೆ ಧರ್ಮಸ್ಥಳದಲ್ಲಿ 80 ವರ್ಷಗಳಿಂದ ನನ್ನ ತಂದೆಯವರು ಜೀವನ ನಡೆಸುತ್ತಿದ್ದು ಯಾವುದೇ ಗೋ ಸಾಗಾಟ, ಮರ ಸಾಗಾಟ ದಂಧೆಯಲ್ಲಿ ಭಾಗಿಯಾಗಿರುವುದಿಲ್ಲ ಎಂದು ತಿಳಿಸಿದರು.

ನನಗೆ 5 ಮಂದಿ ಸಹೋದರರಿದ್ದು, ೩ ಮಂದಿಯನ್ನು ಗೂಂಡಾಗಳೆಂದು ಆರೋಪಿಸಿದ್ದಾರೆ. ನನ್ನ ತಮ್ಮ ಕೃಷ್ಣ ಬಜರಂಗದ ಕಾರ್ಯಕರ್ತನಲ್ಲ ಪಕ್ಷದ ಜವಬ್ದಾರಿ ಮಾತ್ರ ಇದೆ ಎಂದು ಸ್ಪಷ್ಟಪಡಿಸಿದರು.

ಇತ್ತೀಚೆಗೆ ಕುತ್ರೊಟ್ಟು ದೇವಸ್ಥಾನದಲ್ಲಿ ಜರುಗಿದ ಮುಸ್ಲಿಂ ಹುಡುಗ ಹಾಗೂ ಹಿಂದೂ ಯುವತಿಯ ನಡುವೆ ನಡೆದ ಮದುವೆ ಬಗ್ಗೆ ಸ್ಪಷ್ಟತೆಯನ್ನು ನೀಡುತ್ತಾ ಸಂದೀಪ್ ರೈ ಎಂಬವರು ಮದುವೆಯ ಬಗ್ಗೆ ವಿಚಾರ ತಿಳಿಸಿದಾಗ ಆ ಹುಡುಗ ಹಿಂದೂ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮದುವೆ ಆಗುವುದಾದರೆ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಬಹುದು ಎಂದು ಹೇಳಿ ಕುತ್ರೊಟ್ಟು ದೇವಸ್ಥಾನದ ಅರ್ಚಕರಿಗೆ ತಿಳಿಸಿರುತ್ತೇನೆ ಅದರಂತೆ ಈ ಹುಡುಗ ಹುಡುಗಿಯರು ಕಳೆದ ೫ವರ್ಷಗಳಿಂದ ಪ್ರೀತಿಸುತ್ತಿದ್ದು, 4 ವರ್ಷದಿಂದ ಹುಡುಗ ಹಿಂದೂ ಧರ್ಮವನ್ನು ಪಾಲಿಸುವಂತೆ ಇದ್ದುದರಿಂದ ದೇವಸ್ಥಾನದಲ್ಲಿ ಹಿಂದೂ ಧಾರ್ಮಿಕ ವಿಧಿ ವಿಧಾನದಂತೆ ಶರತ್ ಎಂದು ನಾಮಕರಣ ಮಾಡಿ ವಿವಾಹ ಮಾಡಲಾಗಿದೆ ಎಂದು ಹೇಳಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.