ಕೊಕ್ಕಡ: ಶ್ರೀ ಗಣೇಶ್ ಶಾಮಿಯಾನ ಕಾಪಿನಬಾಗಿಲು ಇದರ ಮಾಲಿಕ ಯತೀಶ್ ಶೆಟ್ಟಿ ಕಾಪಿನಬಾಗಿಲು ಇವರ ಹುಟ್ಟು ಹಬ್ಬವನ್ನು ಕೊಕ್ಕಡದಲ್ಲಿರುವ ಎಂಡೋಸಲ್ಫಾನ್ ಸಂತ್ರಸ್ತರ ಪಾಲನಾ ಕೇಂದ್ರಕ್ಕೆ ಹಾಗೂ ಸೌತಡ್ಕದಲ್ಲಿ ಇರುವ ಸೇವಾಧಾಮಕ್ಕೆ ಭೋಜನದ ವ್ಯವಸ್ಥೆಯನ್ನು ಮಾಡುವ ಮುಖಾಂತರ ಮಾ.2 ರಂದು ಸರಳವಾಗಿ ಆಚರಿಸಿಕೊಂಡರು.
ಇವರು ಕೊಕ್ಕಡ ಹೋಳಿಗೆ ಮನೆ ಇಲ್ಲಿಯ ಸದಸ್ಯರಾಗಿ ಹಲವಾರು ಸೇವಾಯಜ್ಞಾಗಳಿಗೆ ಕೊಡುಗೆಯನ್ನು ನೀಡುತ್ತಾ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ತನ್ನನು ತಾನು ತೊಡಗಿಸಿಕೊಂಡಿರುತ್ತಾರೆ.