ಬೆಳ್ತಂಗಡಿ: 2020 ರಲ್ಲಿ ನಡೆದ ಕಿಡ್ ಮಾಡೆಲ್ ಅವಾರ್ಡ್-2020 ರ ವಿನ್ನರ್ ಆಗಿ 2023 ರವರೆಗೆ ಕಿಡ್ ಮಾಡೆಲ್ ಪಟ್ಟದಲ್ಲಿರುವ ಪ್ರತಿಭಾವಂತೆ ಕಿಡ್ ಮಾಡೆಲ್ ಸನ್ಮಿತಾ ಇವರನ್ನು, ಕರ್ನಾಟಕ ಜನಸ್ಪಂದನ ಟ್ರಸ್ಟ್ನ 5ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಕಲಾ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಕಲಾ ಕುಸುಮಗಳ 2020ರ ರಾಜ್ಯ ಮಟ್ಟದ ಪ್ರಶಸ್ತಿಗೆ ಸನ್ಮಿತಾ ಉಜಿರೆ ಆಯ್ಕೆಯಾಗಿದ್ದಾರೆ.
ನಟನೆ, ನಿರೂಪಣೆ,ನೃತ್ಯದಲ್ಲಿ ವಿಶೇಷ ಆಸಕ್ತಿ ಇರುವ ಸನ್ಮಿತಾ, ವಿವೇಕಾನಂದ ವಿದ್ಯಾವರ್ಧಕ ಆಂಗ್ಲ ಮಾಧ್ಯಮ ಶಾಲೆ ಮುಂಡಾಜೆ ಇಲ್ಲಿ 4ನೇ ತರಗತಿ ಓದುತ್ತಿದ್ದು, 2020 ರಿಂದ ಇಲ್ಲಿಯವರೆಗೆ ಪ್ರೀವಂತ ಕ್ರಿಯೆಟಿವ್ ಸೆಂಟರ್ ಮಂಗಳೂರು ನಿರ್ಮಾಣದ ವಿಶೇಷ ಕಾರ್ಯಕ್ರಮ, ಆಲ್ಬಮ್ ಹಾಡುಗಳಲ್ಲಿ ಭಾಗವಹಿಸಿ ಜನಪ್ರಿಯತೆಯನ್ನು ಗಳಿಸಿದ್ದಾರೆ.
ಇವರು ಶಾನುಜೇನು, ಖುಷಿಯಿಂದ, ಶಾಲೆಯ ಕಥೆ ಕಿಡ್ ಮಾಡೆಲ್ ಜೊತೆ, ಪುಟ್ಟ ಪಾರಿಜಾತ, ಚಿಣ್ಣರ ಚಿನ್ನದ ಚಿತ್ತ, ಮಿನುಗುವ ಚುಕ್ಕಿಗಳು, ವೀರರು ಅಮರರು, ಚಿಗುರು ಗೊಂಚಲು, ವಿಶೇಷ ಹೀಗೆ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿ, ಸಮ್ಮಾನಗಳನ್ನು ಪಡೆದಿದ್ದಾರೆ. ಉಜಿರೆಯ ಹಿಬ್ ಬಾಯ್ಸ್ ಡಾನ್ಸ್ ಕ್ರೀವ್ ನಲ್ಲಿ ಡಾನ್ಸ್ ತರಬೇತಿಯನ್ನು ಪಡೆಯುತಿದ್ದು, ಹಲವು ಡಾನ್ಸ್ ಶೋಗಳಲ್ಲಿ ಭಾಗವಹಿಸಿದ್ದಾರೆ.
ಇಗಾಗಲೇ ಹಲವಾರು ವೇದಿಕೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ನೀಡಿದ್ದು, ಬೆಂಗಳೂರಿನಲ್ಲಿ ನಡೆದ ಢ್ರಾಮ ಜೂನಿಯರ್ ಸ್ಪರ್ದೆಗೆ ನಡೆದ ಅಡೀಶನ್ ನಲ್ಲಿ ಮೊದಲ ಬಾರಿ ಸಲೆಕ್ಷನ್ ಅಗಿದ್ದು ಎರಡನೇ ರೌಂಡ್ ನ ಪಲಿತಾಂಶ ಬರಬೇಕಾಗಿದೆ.
ಇವರು ಮಿತ್ತಬಾಗಿಲು ಗ್ರಾಮದ ಕುಕ್ಕಾವು ನಿವಾಸಿ ನಿಶ್ಮಿತಾರವರ ಪುತ್ರಿ.