ಬಳಂಜದಲ್ಲಿ ಶ್ರೀ ಗುರುಪೂಜೆ, ಸರ್ವೇಶ್ವರಿ ದೇವಿಯ ಪೂಜೆ,ಯಕ್ಷಗಾನ ತಾಳಮದ್ದಳೆ, ಧಾರ್ಮಿಕ ಸಭೆ

ಬಳಂಜ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಬಳಂಜ, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಇವರ ಆಶ್ರಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಗುರು ಪೂಜೆ, ಶ್ರೀ ಸರ್ವೇಶ್ವರೀ ದೇವಿ ಪೂಜೆ, ದೀಕ್ಷಾ ಗ್ರಂಥಿ ಧಾರಣೆ ಹಾಗೂ ಧಾರ್ಮಿಕ ಸಭೆಯು ಮಾ.1 ರಂದು ಬಳಂಜ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದ ಭಾಗಿ ಮುಂಡಪ್ಪ ಪೂಜಾರಿ ಸಭಾ ವೇದಿಕೆಯಲ್ಲಿ ನಡೆಯಿತು.

ಬೆಳಗ್ಗೆ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಗುರುಪೂಜೆ, ದೀಕ್ಷಾ ಗ್ರಂಥಿ ಧಾರಣೆ, ಶ್ರೀ ಸರ್ವೇಶ್ವರಿ ದೇವಿಯ ಪೂಜೆ ನಡೆಯಿತು. ನಂತರ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಎಚ್.ಎಸ್ ವಹಿಸಿದ್ದರು.

ಕಾರ್ಯಕ್ರಮವನ್ನು ಭಾರತೀಯ ಜನತಾ ಪಾರ್ಟಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂ ಡಬಿದಿರೆ ಉದ್ಘಾಟಿಸಿದರು.

ಮಂಗಳೂರು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತುಳುವಬೊಳ್ಳಿ ದಯಾನಂದ ಜಿ.ಕತ್ತಲ್ ಸಾರ್ ಧಾರ್ಮಿಕ ಭಾಷಣವನ್ನು ಮಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಪೊಲೀಸ್ ವೃತ್ತ ನೀರೀಕ್ಷಕ ಶಿವಕುಮಾರ ಬಿ, ಬೆಳ್ತಂಗಡಿ ಶ್ರೀ ಗು.ನಾ.ಸ್ವಾ.ಸೇ ಸಂಘ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ, ಮಂಗಳೂರು ಕೆ.ಎಸ್.ಆರ್.ಟಿ.ಸಿ, ಸಿವಿಲ್ ಇಂಜಿನಿಯರ್ ಗಂಗಾದರ, ಬಳಂಜ ಗ್ರಾ.ಪಂ ಅಧ್ಯಕ್ಷ ಹೇಮಂತ್, ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿ ಉಪಾಧ್ಯಕ್ಷ ಹರೀಶ್ ಕೆ ಪೂಜಾರಿ ಭಾಗವಹಿಸಿದ್ದರು. ಯುವ ಬಿಲ್ಲವ ವೇದಿಕೆ ನಿದೇ೯ಶಕ ರಂಜಿತ್ ಎಚ್. ಡಿ. ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬಳಂಜ ಗ್ರಾ.ಪಂ ಅಧ್ಯಕ್ಷ ಹೇಮಂತ್, ಬಳಂಜ ಗ್ರಾ.ಪಂ ಸದಸ್ಯರಾದ ಬಾಲಕೃಷ್ಣ ಪೂಜಾರಿ ಯ್ಯೆಕುರಿ, ರವೀಂದ್ರ ಬಿ.ಅಮೀನ್, ಲೀಲಾವತಿ, ಸುಚಿತ್ರಾ ಪ್ರಶಾಂತ್ ಇವರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.

ಈ ವೇಳೆ ಸಂಘದ ಅಧ್ಯಕ್ಷ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್.ಎಸ್, ಗೌರವ ಅಧ್ಯಕ್ಷ ಹೆಚ್ ಧರ್ಣಪ್ಪ ಪೂಜಾರಿ, ಯು.ಬಿ.ವೇ ಅಧ್ಯಕ್ಷ ಪ್ರವೀಣ್ ಡಿ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಸಂತೋಷ್ ಪಿ ಕೋಟ್ಯಾನ್, ಸಂಘದ ನಿರ್ದೆಶಕರುಗಳು, ಸಮಿತಿಯ ಸರ್ವಸದಸ್ಯರು, ಹಾಗೂ ಊರ ಭಕ್ತಾಧಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಯುವ ಸಾಹಿತಿ ಚಂದ್ರಹಾಸ್ ಬಳಂಜ ನಿರೂಪಿಸಿದರು, ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಪ್ರ.ಕಾರ್ಯದರ್ಶಿ ಸಂತೋಷ್ ಪಿ ಕೋಟ್ಯಾನ್ ಸ್ವಾಗತಿಸಿದ ರು. ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಉಪಾಧ್ಯಕ್ಷ ಯತೀಶ್ ವೈ ಎಲ್ ಧನ್ಯವಾದಗೈದರು.

ಯಕ್ಷಗಾನ ತಾಳಮದ್ದಳೆ:

ಸಭಾಕಾರ್ಯಕ್ರಮದ ನಂತರ ಮಧ್ಯಾಹ್ನ ಗಂಟೆ 3.೦೦ ಕ್ಕೆ ರವಿಚಂದ್ರ ಕನ್ನಡಿಕಟ್ಟೆ ಇವರ ಸಾರಥ್ಯದಲ್ಲಿ ಮೋಕ್ಷ ಸಂಗ್ರಾಮ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.