ಉಜಿರೆ : ಮುಹಿಯ್ಯುದ್ಧೀನ್ ಜುಮಾ ಮಸ್ಜಿದ್, ಹಳೆಪೇಟೆ, ಉಜಿರೆ ಇದರ ಅಂಗಸಂಸ್ಥೆಯಾದ ಅಲ್ ಅಮೀನ್ ಯಂಗ್ಮೆನ್ಸ್, ಹಳೆಪೇಟೆ, ಉಜಿರೆ ಇದರ ಮಹಾಸಭೆ ಫೆ. 18ರಂದು ಮದರಸ ಹಾಲ್ನಲ್ಲಿ ಕೇಂದ್ರ ಕಮಿಟಿ ಅಧ್ಯಕ್ಷ ಬಿ.ಎಂ.ಅಬ್ದುಲ್ ಹಮೀದ್ ಹಾಜಿಯವರ ನೇತೃತ್ವದಲ್ಲಿ ಜರುಗಿತು.
ಕಾರ್ಯದರ್ಶಿ ರಹಿಮಾನ್ ರವರು ಸರ್ವರನ್ನು ಸ್ವಾಗತಿಸಿ, ಕಳೆದ ಸಾಲಿನ ವರದಿಯನ್ನು ಮಂಡಿಸಿದರು. ಹಳೆ ಕಮಿಟಿ ಬರ್ಕಸ್ ಮಾಡಿ ಹೊಸ ಕಮಿಟಿಯನ್ನು ನೇಮಕ ಮಾಡಲಾಯಿತು. ಅಧ್ಯಕ್ಷರಾಗಿ ಶಾಕೀರ್, ಉಪಾಧ್ಯಕ್ಷರಾಗಿ ಹಂಝ ಎಂ.ಹೆಚ್, ಸವಾದ್ ಬಿ.ಹೆಚ್ ಕಾರ್ಯದರ್ಶಿ ಫಝಲ್ ರಹಿಮಾನ್ ಕೋಯ, ಜತೆ ಕಾರ್ಯದರ್ಶಿ ಸಲ್ಮಾನ್ ಎಸ್.ಎ., ಖಜಾಂಜಿ ರಹಿಮಾನ್, ಸಲಹೆಗಾರರಾಗಿ ಹೈದರ್ ಕೂಟ್ರೋಡಿ, ಹನೀಫ್ ಟಿ.ಹೆಚ್., ಇಬ್ರಾಹಿಂ ಬಿ.ಹೆಚ್., ಸಲೀಂ ಯು.ಹೆಚ್.ನೇಮಕ ಮಾಡಲಾಯಿತು.
ಕೇಂದ್ರ ಕಮಿಟಿ ಪದಾಧಿಕಾರಿಗಳು, ಅಲ್ ಅಮೀನ್ ಅಸೋಸಿಯೇಶನ್ ದಮ್ಮಾಮ್ ಜುಬೈಲ್ ರಿಯಾದ್ ಪಧಾದಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.