ಮಂಗಳೂರು ವಿ.ವಿ. ಫ್ಲೋರ್  ಬಾಲ್ ತಂಡಕ್ಕೆ ಸೇಕ್ರೆಡ್ ಹಾರ್ಟ್  ಕಾಲೇಜಿನ ವಿದ್ಯಾರ್ಥಿ ಆಯ್ಕೆ

ಮಡಂತ್ಯಾರು: ಮಾ. 9 ರಿಂದ 11 ರವರೆಗೆ ಐ.ಟಿ.ಎಮ್. ವಿಶ್ವವಿದ್ಯಾನಿಲಯ , ಗ್ವಾಲಿಯರ್, ಮಧ್ಯಪ್ರದೇಶದಲ್ಲಿ ನಡೆಯಲಿರುವ ಪುರುಷರ ಅಖಿಲ ಭಾರತ ಅಂತರ್ ವಿ.ವಿ. ಫ್ಲೋರ್ ಬಾಲ್ ಪಂದ್ಯಾಟಕ್ಕೆ ಮಂಗಳೂರು ವಿ.ವಿ. ತಂಡವನ್ನು ಪ್ರತಿನಿಧಿಸಲು ಸೇಕ್ರೆಡ್ ಹಾರ್ಟ್ ಕಾಲೇಜು, ಮಡಂತ್ಯಾರಿನ ದ್ವಿತೀಯ ಕಲಾವಿಭಾಗದ ವಿದ್ಯಾರ್ಥಿ ರಂಜಿತ್ ಪಿ. ಇವರು ಆಯ್ಕೆಯಾಗಿರುತ್ತಾರೆ.

ಇವರಿಗೆ ಸ್ವಾಮಿ ವಿವೇಕಾನಂದ ಪ.ಪೂ. ಕಾಲೇಜು, ಎಡಪದವು ಇಲ್ಲಿಯ ದೈಹಿಕ ಶಿಕ್ಷಣ ನಿರ್ದೇಶಕ ಪ್ರೇಮನಾಥ್ ಶೆಟ್ಟಿ ಮತ್ತು ಮೂಡಬಿದ್ರೆಯ ಸುಪ್ರೀತ್ ರವರು ತರಬೇತಿ ನೀಡಿರುತ್ತಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.