ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಚೆನ್ನವೀರ ಕಣವಿ ಸ್ಮರಣೆ ಕಾರ್ಯಕ್ರಮವು ಫೆ.26 ರಂದು ವಾಣಿ ವಿದ್ಯಾ ಸಂಸ್ಥೆ ಹಳೆಕೋಟೆ ಬೆಳ್ತಂಗಡಿಯಲ್ಲಿ ಜರುಗಿತು.
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ ಎಂ.ಪಿ ಶ್ರೀನಾಥ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮವನ್ನು ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಿ.ಕುಶಾಲಪ್ಪ ಗೌಡ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಡಿ.ಯದುಪತಿ ಗೌಡ ಇವರು ಡಾ.ಎಂ.ಪಿ ಶ್ರೀನಾಥ್ರವರಿಂದ ಕನ್ನಡ ಧ್ವಜವನ್ನು ಪಡೆದುಕೊಂಡು, ಪದಾಧಿಕಾರಿಗಳ ಪದಗ್ರಹಣ ಸ್ವೀಕಾರ ಮಾಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ, ಗಮಕಿಗಳು ಪ್ರೊ. ಮಧೂರ್ ಮೋಹನ ಕಲ್ಲೂರಾಯ ಚೆನ್ನವೀರ ಕಣವಿ ಸ್ಮರಣೆಯನ್ನು ಮಾಡಿದರು. ನಂತರ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಶಾಲು ಹೊದಿಸಿ ಗೌರವಿಸಲಾಯಿತು.
ಈ ವೇಳೆ ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಿ.ಕುಶಾಲಪ್ಪ ಗೌಡ, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ ಎಂ.ಪಿ ಶ್ರೀನಾಥ್, ಡಿ.ಯದುಪತಿ ಗೌಡ, ಪ್ರೊ. ಮಧೂರ್ ಮೋಹನ ಕಲ್ಲೂರಾಯ, ಕೋಶಾಧಿಕಾರಿ ಧರ್ಣಪ್ಪ ಡಿ ಉಪಸ್ಥಿತರಿದ್ದರು.
ಬೆಳ್ತಂಗಡಿ ಕ.ಸಾ.ಪ ಗೌರವಕಾರ್ಯದರ್ಶಿ ರಾಮಕೃಷ್ಣ ಬೆಳಾಲು ಇವರು ಸ್ವಾಗತಿಸಿ, ಅನುರಾಧ ಕೆ ರಾವ್ ನಿರೂಪಿಸಿ, ಬೆಳ್ತಂಗಡಿ ಕ.ಸಾ.ಪ ಗೌರವ ಕಾರ್ಯದರ್ಶಿ ಪ್ರಮೀಳಾ ಧನ್ಯವಾದಗೈದರು.
ಬೆಳ್ತಂಗಡಿ ಕ.ಸಾ.ಪ ಸಮಿತಿ ಸದಸ್ಯರು ಬೆಳ್ಳಿಯಪ್ಪ ಕೆ, ಮೀನಾಕ್ಷಿ ಕಾರ್ಯಕ್ರಮದ ಸಂಯೋಜನೆಯನ್ನು ಮಾಡಿದರು.