ಬೆಳ್ತಂಗಡಿ ಕಾಜೂರು ಉರೂಸ್ ಪ್ರಯುಕ್ತ: ಮುತಅಲ್ಲಿಂ ಸಂಗಮ, ಹಿರಿಯ ವಿದ್ವಾಂಸರಿಗೆ ಸನ್ಮಾನ

ಬೆಳ್ತಂಗಡಿ: ಹಯಾತುಲ್ ಔಲಿಯಾ ದರ್ಗಾ ಶರೀಫ್ ಕಾಜೂರು ಮಖಾಂ ಉರೂಸ್ ಪ್ರಯುಕ್ತ ಮುತಅಲ್ಲಿಂ ಸಂಗಮ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಕಾಜೂರು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ವಹಿಸಿದ್ದರು.

ಉದ್ಘಾಟನೆಯನ್ನು ಕರ್ನಾಟಕ ಜಂಇಯ್ಯತುಲ್ ಉಲಮಾ ರಾಜ್ಯ ಉಪಾಧ್ಯಕ್ಷ ಯು.ಕೆ ಮುಹಮ್ಮದ್ ಸಅದಿ ವಳವೂರು ನೆರವೇರಿಸಿದರು.
ವಳವೂರು ಉಸ್ತಾದ್ ಸೇರಿದಂತೆ ಹಿರಿಯ ವಿದ್ವಾಂಸ ಬಿ.ಹೆಚ್ ಅಬೂಸ್ವಾಲಿಹ್ ಮುಸ್ಲಿಯಾರ್ ಮುದರ್ರಿಸ್ ಆಲಡ್ಕ ಇವರಿಬ್ಬರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಕಾಜೂರು ತಂಙಳ್ ಅವರ ದರ್ಸ್ ಶಿಷ್ಯವರ್ಗದವರ ಸಂಘಟನೆಯಾದ ಇರ್ಶಾದ್‌ತ್ತುಲ್ಬಾಬ್ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುರ್ರಝಾಕ್ ಇಮ್ದಾದಿ ನಾವೂರು, ಉಮರುಲ್ ಫಾರೂಕ್ ಸಖಾಫಿ ಬಕ್ರಹಳ್ಳಿ ಪ್ರಸ್ತಾವನೆಗೈದರು.

ಸಮಾರಂಭದಲ್ಲಿ ಇಬ್ರಾಹಿಂ ನಈಮಿ ಮಾಗುಂಡಿ, ಸಿದ್ದೀಕ್ ಮುಈನಿ ಉಳ್ತೂರು, ಶಾಹುಲ್ ಹಮೀದ್ ಮುಈನಿ ಕನ್ಯಾಡಿ,ಇಲಲ್, ಕಾಜೂರು ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯ ಸಯ್ಯಿದ್ ಕಾಜೂರು ತಂಙಳ್ ದುಆ, ಉಮರುಲ್ ಫಾರೂಕ್ ಸಖಾಫಿ ಹಿಮಮಿ ಕುಪ್ಪೆಟ್ಟಿ, ಕಿಲ್ಲೂರು ಮುದರ್ರಿಸ್ ರಫೀಕ್ ಸಅದಿ, ವೇದಿಕೆಯಲ್ಲಿ ಉರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು, ಕೋಶಾಧಿಕಾರಿ ಕೆ.ಎಮ್ ಕಮಾಲ್ ಕಾಜೂರು, ಉಪಾಧ್ಯಕ್ಷ ಬಿ.ಹೆಚ್ ಅಬೂಬಕ್ಕರ್ ಹಾಜಿ, ಜೊತೆ ಕಾರ್ಯದರ್ಶಿ ಅಶ್ರಫ್ ಕಿಲ್ಲೂರು, ಮಾಜಿ ಅಧ್ಯಕ್ಷರುಗಳಾದ ಮುಹಮ್ಮದ್ ಸಖಾಫಿ, ಇಬ್ರಾಹಿಂ ಮದನಿ ಮೊದಲಾದವರು ಉಪಸ್ಥಿತರಿದ್ದರು.

ಕಾಜೂರು ಸಹಾಯಕ ಧರ್ಮಗುರು ರಶೀದ್ ಮದನಿ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಕಾಜೂರು ತಂಙಳ್, ಹಾಗೂ ಕಾಜೂರು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಮತ್ತು ಪ್ರ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ಅವರನ್ನು ಗೌರವಿಸಲಾಯಿತು.. ಬಳಿಕ ಕಾಜೂರು ಕ್ಷೇತ್ರದ ವತಿಯಿಂದ ಹಳೆವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ನಂತರ
ಸಲೀಂ ಸಅದಿ ಕನ್ಯಾಡಿ ಅವರಿಗೆ ವೈದ್ಯಕೀಯ ನೆರವು ನೀಡಲಾಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.