10,001 ಯುವಕರಿಂದ ರಕ್ತದಾನ ಮಾಡಿಸುವ ಮೂಲಕ ಹೊಸ ಮೈಲಿಗಲ್ಲನ್ನು ತಲುಪಿದ ರಾಜಕೇಸರಿ ಸಂಘಟನೆ

ಬೆಳ್ತಂಗಡಿ: ಕಳೆದ 9 ವರ್ಷಗಳಿಂದ ತುರ್ತು ಸೇವಾ ಕಾರ್ಯದಲ್ಲಿ ಹೆಸರುವಾಸಿಯಾಗಿರುವ ರಾಜಕೇಸರಿ ಸಂಘಟನೆಯು ಇಂದು ಮತ್ತೊಂದು ನೂತನ ಸೇವಾ ದಾಖಲೆಯನ್ನು ಬರೆದಿದೆ.

ರಾಜಕೇಸರಿ ಸಂಘಟನೆಯ ನೇತಾರ ದೀಪಕ್ ಜಿ. ಬೆಳ್ತಂಗಡಿ ಇವರ ನೇತೃತ್ವದಲ್ಲಿ ವಿಶೇಷವಾಗಿ, ತುರ್ತು ಸಂದರ್ಭದಲ್ಲಿ ರಕ್ತದ ಅಗತ್ಯವಿರುವವರಿಗೆ ದಾನಿಗಳ ಸಹಕಾರದಿಂದ ರಕ್ತ ಪೂರೈಸುತ್ತಿದ್ದು.. ಇದೀಗ ಒಂಬತ್ತು ವರ್ಷದಲ್ಲಿ 10,001 ಯುವಕರಿಂದ ರಕ್ತದಾನ ಮಾಡಿಸುವ ಮೂಲಕ ರಾಜಕೇಸರಿ ಸಂಘಟನೆಯು ಹೊಸ ಮೈಲಿಗಲ್ಲನ್ನು ತಲುಪಿದೆ.

10,000ನೇ ಯೂನಿಟ್ ರಕ್ತವನ್ನು ಲೈಲಾದ ಜ್ಯೋತಿ ಹಾಸ್ಪಿಟಲ್‌ನಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ವೇಣೂರಿನ ರಮೇಶ್ ಎಂಬವರಿಗೆ ನೀಡುವ ಮೂಲಕ ದೀಪಕ್ ಜಿ ಸತತ ೨೨ನೇ ಬಾರಿ ರಕ್ತದಾನ ಮಾಡಿದ ಕೀರ್ತಿಗೆ ಪಾತ್ರರಾದರು.

ಇದೇ ಸಂದರ್ಭ 10,001ನೇ ಯೂನಿಟ್ ರಕ್ತವನ್ನು ಕೂಡಾ ರಮೇಶ್ ಎಂಬವರಿಗೆ ಉಜಿರೆ ಗ್ರಾಮ ಪಂಚಾಯತ್ ಸದಸ್ಯರ ಗುರುಪ್ರಸಾದ್ ಕೋಟ್ಯಾನ್ ನೀಡುವ ಮೂಲಕ ಇತರ ಸಂಘಟನೆಗಳಿಗೂ ಮಾದರಿಯಾಗಿದೆ.

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.