ದೇಶ ದ್ರೋಹ ಹೇಳಿಕೆ ನೀಡಿದ ಸಚಿವ ಈಶ್ವರಪ್ಪರವರನ್ನು ಸಂಪುಟದಿಂದ ವಜಾ ಮಾಡಿ: ಬೆಳ್ತಂಗಡಿ ಕಾಂಗ್ರೆಸ್ ಪಕ್ಷದಿಂದ ರಾಜ್ಯಪಾಲರಿಗೆ ಮನವಿ

ಬೆಳ್ತಂಗಡಿ: ದೇಶ ದ್ರೋಹದ ಹೇಳಿಕೆ ನೀಡಿದ, ಸಚಿವ ಈಶ್ವರಪ್ಪರವರನ್ನು ಸಂಪುಟದಿಂದ ವಜಾ ಮಾಡಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಫೆ.17ರಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ನೀಡಿದರು.

ಸಚಿವ ಈಶ್ವರಪ್ಪನವರು ಇತ್ತೀಚೆಗೆ ರಾಷ್ಟ್ರದ ರಾಜಧಾನಿಯು ಕೆಂಪು ಕೋಟೆಯಲ್ಲಿ ರಾಷ್ಟ್ರ ಧ್ವಜದ ಬದಲು ಕೇಸರಿ ಧ್ವಜವನ್ನು ಹಾರಿಸಲಾಗುವುದು ಎಂದು ದೇಶ ದ್ರೋಹ ಹೇಳಿಕೆ ನೀಡಿದ್ದು, ತಮ್ಮ ಸ್ಥಾನದ ಘನತೆಯನ್ನು ಮರೆತು ಬೇಜವಬ್ದಾರಿಯುತ ಹೇಳಿಕೆಯನ್ನು ನೀಡಿದ್ದಾರೆ. ಅವರನ್ನು ತಕ್ಷಣ ಸಚಿವ ಸಂಪುಟದಿಂದ ವಜಾ ಮಾಡಿ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಬೆಳ್ತಂಗಡಿ ಮಾಜಿ ಕಾಂಗ್ರೆಸ್ ಶಾಸಕ ವಸಂತ ಬಂಗೇರ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ರಂಜನ್ ಜಿ ಗೌಡ, ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್, ಹರೀಶ್ ಕಿಣಿ, ಪಿ.ಎಂ ಅಬ್ಬಾಸ್, ಗಪೂರ್, ಸಭಾಸ್ಟೀನ್ ಪಿ.ಟಿ, ಪಿ.ಸಿ ಮ್ಯಾಥ್ಯು, ಇಸುಬು, ಭರತ್ ಕುಮಾರ್, ಕೆ.ಸಲೀಂ.ಜಿ.ಕೆರೆ, ಪಿ.ಮಹಮ್ಮದ್ ನೆರಿಯ, ಸಾಜು ಜೋಸೆಫ್ ನೆರಿಯ, ಲಕ್ಷ್ಮಣ ನೆರಿಯ, ಪಿ.ಕೆ ರಾಜನ್, ವಿನೆಂಟ್ ಡಿಸೋಜಾ, ಬಿ.ಅಶ್ರಫ್ ನೆರಿಯ, ಶ್ರೀನಿವಾಸ ಕೆ.ಉಜಿರೆ, ಸತೀಶ್ ನಾಯಕ್, ರೂಪಲತಾ ಅಬ್ಬಾಸ್ ಮದ್ದಡ್ಕ, ಅಬ್ದುಲ್ ರಝಾಕ್ ತೆಕ್ಕಾರು,ಅಬ್ದುಲ್ ರೆಹಿಮಾನ್ ಪಡ್ಪು ಭಾಗಿಯಾಗಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.