ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಗುರುದೇವ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯ ವಿಷಯದ ಕುರಿತು ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು.
ತರಬೇತಿ ಕಾರ್ಯಗಾರವನ್ನು ಎಸ್.ಡಿ.ಎಂ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಪ್ರಸಾದ್ ಬಿ .ಎಸ್, ನಿಕಟಪೂರ್ವ ಅಧ್ಯಕ್ಷ ಸ್ವರೂಪ್ ಶೇಖರ್, ವಲಯ ಉಪಾಧ್ಯಕ್ಷ ಪ್ರಶಾಂತ್ ಲಾಯಿಲ,ಕಾಲೇಜಿನ ಪ್ರಾಂಶುಪಾಲರಾದ ಸುಕೇಶ್, ಪೂರ್ವ ಅಧ್ಯಕ್ಷರುಗಳಾದ ನಾರಾಯಣಶೆಟ್ಟಿ, ಅಭಿನಂದನ್ ಹರೀಶ್ ಕುಮಾರ್ ,ಚಿದಾನಂದ ಇಡ್ಯ , ಹೇಮಾವತಿ, ಗಣೇಶ್ ಶಿರ್ಲಾಲು, ನಿತೇಶ್ ಅದೇಲು, ಉಪಸ್ಥಿತರಿದ್ದರು.