ಉರುವಾಲು : ಇಲ್ಲಿಯ ಉರುವಾಲು ಕಾಣಿಚ್ಚಾರು ಮನೆ ಕೃಷಿ ತೋಟದಲ್ಲಿ ಬೆಳೆದ ಅನಾನಸು ವಿಶೇಷವಾಗಿ 6 ಕಾಯಿಗಳ ಜೊತೆಯಲ್ಲಿ ಸುಮಾರು 30 ಕ್ಕೂ ಹೆಚ್ಚಿನ ಗಿಡದ ಎಲೆಗಳನ್ನು ಹೊಂದಿದೆ. ಅಂದಾಜು ಒಂದುವರೆಗೂ ಆಡಿಗೂ ಹೆಚ್ಚಿನ ಗಾತ್ರದಲ್ಲಿ ಇರುವುದರಿಂದ ಕೃತಕವಾಗಿ ತಯಾರಿಸಿದಂತೆ ಇದೆ. ಪ್ರಕೃತಿಯ ಮಡಿಲಲ್ಲಿ ವಿಸ್ಮಯಕಾರಿ ಅನಾನಸು ಯಕ್ಷಗಾನದಲ್ಲಿ ಉಪಯೋಗಿಸುವ ಕಿರೀಟವನ್ನು ಹೊಲುವ ರೀತಿಯಲ್ಲಿದೆ.
ಪ್ರಗತಿಪರ ಕೃಷಿಕರಾಗಿದ್ದು ವೃತ್ತಿಯಲ್ಲಿ ಬೆಳ್ತಂಗಡಿ ನೋಟರಿ ವಕೀಲ ರಾಮಚಂದ್ರ ಗೌಡರು ಬೆಳೆದ ಕೃಷಿ ತೋಟದಲ್ಲಿ ವಿಸ್ಮಯಕಾರಿ ಅನಾನಸು ಕಂಡು ಬಂದಿದೆ.