ದೊಂಡೋಲೆ ಪರಶುರಾಮ ಬಾಲಾಲಯದಲ್ಲಿ ಹುಣ್ಣಿಮೆ ಭಜನೆ ಮತ್ತು ದೇವಾಲಯ ನಿರ್ಮಾಣ ಕುರಿತು ಚರ್ಚೆ

ದೊಂಡೋಲೆ:ಧರ್ಮಸ್ಥಳ ಗ್ರಾಮದ ದೊಂಡೋಲೆಯಲ್ಲಿ ಪರಶುರಾಮ ದೇವಾಲಯಕ್ಕೆ ಆಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಶಿಲಾನ್ಯಾಸ ಇತ್ತೀಚೆಗೆ ನೆರವೇರಿದೆ. ಜ.೧೭ರಂದು   ನಿರ್ಮಿಸಲಾಗಿರುವ ಬಾಲಾಲಯದಲ್ಲಿ ಹುಣ್ಣಿಮೆಯ ಪ್ರಯುಕ್ತ ವಿಶೇಷ ಭಜನಾ ಕಾರ್ಯಕ್ರಮ ನೆರವೇರಿತು.

ಕಮಲಾ ಇವರ ಸೇವಾರೂಪದಲ್ಲಿ ನಡೆದ ಭಜನಾ ಕಾರ್ಯಕ್ರಮದಲ್ಲಿ ಊರ ಗ್ರಾಮಸ್ಥರು ಭಾಗಿಯಾಗಿದ್ದರು. ಭಜನಾ ಕಾರ್ಯಕ್ರಮದ ನಂತರ ದೇವಾಲಯ ನಿರ್ಮಾಣದ ಕುರಿತು ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಮಾತುಕತೆ ನಡೆಸಿದರು. ಈಗಾಗಲೇ ಇರುವ ಸಮಿತಿಗಳಿಗೆ ಹೊಸ ಸದಸ್ಯರನ್ನು ನೇಮಕಗೊಳಿಸಿವ ಕುರಿತು, ದೇವಾಲಯ ನಿರ್ಮಾಣದ ವೇಳೆಯ ಖರ್ಚುವೆಚ್ಚಗಳ ಬಗ್ಗೆ ಚರ್ಚಿಸಲಾಯಿತು. ಜೊತೆಗೆ ಪ್ರಾಯಶ್ಚಿತ ಧಾರ್ಮಿಕ ವಿಧಿ ವಿಧಾನಗಳನ್ನು ಮುಂದಿನ ದಿನಗಳಲ್ಲಿ ನೆರವೇರಿಸುವ ಬಗ್ಗೆಯೂ ಮುಕ್ತ ಮಾತುಕತೆ ನಡೆಸಲಾಯಿತು.

ಈ ವೇಳೆ ಪರಶುರಾಮ ದೇವಾಲಯದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಪುರಂದರರಾವ್, ಗೌರವಾಧ್ಯಕ್ಷರಾದ ಸತ್ಯಪ್ರಿಯ ಕಲ್ಲೂರಾಯ, ಕಾರ್ಯದರ್ಶಿ ಸೂರ್ಯನಾರಾಯಣ ರಾವ್, ಶ್ರೀನಿವಾಸ ಭಟ್, ಅಶೋಕ್ ಭಟ್, ಜಯಪ್ರಕಾಶ್ ಮೇಸ್ತ್ರಿ, ಕಮಲಾಕ್ಷ ಆಚಾರ್ಯ, ಮನೋಹರ್ ,ಗಾಯತ್ರಿ ಸೂರ್ಯನಾರಾಯಣ ರಾವ್, ಸಂಧ್ಯಾ ಎಸ್ ಭಟ್, ಜ್ಯೋತಿ, ಗೀತಾ ಅಚ್ಯುತ, ಕಮಲಾ, ಯಶೋದ ರಘುಚಂದ್ರ, ಮಂಜುಳಾ ಉಮೇಶ್, ಭವ್ಯ, ಕಿರಣ್ ದೊಂಡೋಲೆ, ದಾಮೋದರ್ ದೊಂಡೋಲೆ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.