ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಸುಮಾರು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ವೈದ್ಯ ವೃತ್ತಿಯನ್ನು ನಡೆಸುತ್ತಾ ಬಂದಿರುವ ವೈದ್ಯ ವಿಶಾರದ ಟಿ. ಎನ್. ತುಳಪುಳೆ (88) ದೀರ್ಘಕಾಲದ ಅನಾರೋಗ್ಯದಿಂದ ಜ.17ರಂದು ವಿಧಿವಶರಾದರು.
ಮೃತ ಟಿ. ಎನ್. ತುಳಪುಳೆ ಹವ್ಯಾಸಿ ಹರಿಕಥೆ ದಾಸರಾಗಿಯೂ ಗುರುತಿಸಿಕೊಂಡಿದ್ದರು. ಸಾಹಿತಿಯಾಗಿ ಹತ್ತಾರು ಕನ್ನಡ ಕೃತಿಗಳನ್ನು ರಚಿಸಿರುವ ಇವರ ಮನೆಯಲ್ಲಿ ಅಧ್ಯಯನ ಯೋಗ್ಯ ಕನ್ನಡ ಗ್ರಂಥಗಳ ಲೈಬ್ರೆರಿಯೇ ಇತ್ತು. ಕೆಲ ವರ್ಷಗಳ ಹಿಂದೆ ನಡೆದ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು.