ಶಿರ್ಲಾಲು: ಗಣರಾಜ್ಯೋತ್ಸವದ ಪೆರೇಡ್ ಗಾಗಿ ಕೇರಳ ಸರಕಾರ ಆಯೋಜಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಕೇಂದ್ರ ಸರ್ಕಾರದ ಗಣರಾಜ್ಯೋತ್ಸವ ಸಮಿತಿ ತಿರಸ್ಕರಿಸಿರುವುದನ್ನು ಶಿರ್ಲಾಲು ಯುವ ಬಿಲ್ಲವ ವೇದಿಕೆ ಖಂಡಿಸುತ್ತದೆ.
ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ ಮಹಾನ್ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳು. ಸರ್ವರಲ್ಲಿಯೂ ಸಮಾನತೆ ಕಂಡವರು. ಇಂತಹ ಗುರುವನ್ನು ಅವಮಾನಿಸುವುದು ಸರಿಯಲ್ಲ ಕೇಂದ್ರ ಸರ್ಕಾರದ ಈ ನಿಲುವು ಸರಿಯಲ್ಲ. ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಭಕ್ತಿಯಿಂದ ಪೂಜಿಸುವ ಬಹುಸಂಖ್ಯೆಯ ಹಿಂದುಳಿದ ವರ್ಗದವರ ಜನರ ಮನಸ್ಸಿನ ಭಾವನೆಗೆ ದಕ್ಕೆಯಾಗಿದೆ. ಇದೊಂದು ಗಂಭೀರ ವಿಷಯವಾಗಿದ್ದು ಸರ್ಕಾರವು ನಾರಾಯಣ ಗುರುಗಳ ಸ್ತಬ್ಧ ಚಿತ್ರಕ್ಕೆ ಅವಕಾಶ ಮಾಡಿಕೊಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕೆಂದು ಶಿರ್ಲಾಲು ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಹರೀಶ್ ಕಲ್ಲಾಜೆ ತಿಳಿಸಿದ್ದಾರೆ.