ಚಾರ್ಮಾಡಿ :ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ನಿರ್ದೇಶಕ, ಬಿಲ್ಲವ ಮುಖಂಡ ದಯಾನಂದ (47ವ) ಪೊಂಗರ್ದಡಿ ರಸ್ತೆ ಅಪಘಾತದಲ್ಲಿ ಜ. 15 ರಂದು ಸಂಜೆ ನಿಧನ ಹೊಂದಿದ್ದಾರೆ.
ಚಾರ್ಮಾಡಿಯ ಸುಣ್ಣದ ಗೂಡು ಎಂಬಲ್ಲಿ ಖಾಸಗಿ ಬಸ್ ಮತ್ತು ಇವರ ಬೈಕ್ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ . ಇವರು ಪತ್ನಿ, ಇಬ್ಬರು ಗಂಡು ಮಕ್ಕಳನ್ನು, ಕುಟುಂಬ ವರ್ಗದವರನ್ನು ಅಗಲಿದ್ದಾರೆ.
ಇವರು ಹಲವಾರು ಸಂಘ ಸಂಸ್ಥೆ ಗಳಲ್ಲಿ ಸಮಾಜ ಸೇವೆ ಗೈಯ್ಯುತಿದ್ದರು.