ಧರ್ಮಸ್ಥಳ:ನೂರಾರು ವರುಷಗಳ ಐತಿಹ್ಯವಿರುವ ದೊಂಡೋಲೆ ಪರಶುರಾಮ ದೇವಾಲಯಕ್ಕೆ ಜ.15 ರಂದು ಆಲಂಬಾಡಿ ಪದ್ಮನಾಭ ತಂತ್ರಿಗಳ ಸಾರಥ್ಯದಲ್ಲಿ ಪೂಜಾ ಕಾರ್ಯ,ಶಿಲಾನ್ಯಾಸದ ಧಾರ್ಮಿಕ ವಿಧಿವಿಧಾನಗಳು ನೆರವೇರಿತು.
ಪರಶುರಾಮ ದೇವಾಲಯದ ಬಾಲಾಲಯದಲ್ಲಿ ಮೊದಲು ಪ್ರಾರ್ಥನೆ ಸಲ್ಲಿಸಿ, ನಂತರ ಶಿಲಾನ್ಯಾಸ ನೆರವೇರಿಸಲಾಯಿತು. ಬೆದ್ರಡ್ಕ ರಮೇಶ್ ಕಾರಂತ್ ರವರು ಮಾರ್ಕಿಂಗ್ ಮಾಡಿದ ನಂತರ ಪಾಯ ತೆಗೆದ ಸ್ಥಳದಲ್ಲಿ ಶಿಲಾನ್ಯಾಸ ನೆರವೇರಿತು.
ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ ಹಾಗೂ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಭಾಗಿಯಾಗಿ ದೇವಾಲಯ ವಠಾರದಲ್ಲಿ ತೆಂಗಿನ ಸಸಿ ನೆಟ್ಟು,ಶುಭಹಾರೈಸಿದರು.
ಆಲಂಬಾಡಿ ಪದ್ಮನಾಭ ತಂತ್ರಿಗಳಿಂದ ದೇವಸ್ಥಾನಕ್ಕೆ ಶಿಲಾನ್ಯಾಸ ನೆರವೇರಿದ ನಂತರದಲ್ಲಿ ದೇವಸ್ಥಾನದ ಕೆಲಸ ಆರಂಭಿಸಲು ತೀರ್ಮಾನಿಸಲಾಗಿದೆ.
ಈ ವೇಳೆ ದೊಂಡೋಲೆ ಮನೆಯವರು, ಗ್ರಾಮದ ಪ್ರಮುಖರು,ಮಹಿಳಾ ಸದಸ್ಯರು,ಊರ ಪರವೂರ ಭಕ್ತರು ಭಾಗಿಯಾಗಿದ್ದರು.