ಅಳದಂಗಡಿ ಗುತ್ತಿನ ಪಟ್ಟಿ ನೀಡುವ ಕಾರ್ಯಕ್ರಮ

ಅಳದಂಗಡಿ: ಅಳದಂಗಡಿ  ಸೀಮೆಯ ಗುತ್ತುಬರ್ಕೆಗಳಲ್ಲಿ ಒಂದಾದ ಕೊಡಂಗೆ ಗುತ್ತು ಇಲ್ಲಿನ ಬಡಗಕಾರಂದೂರು ಗ್ರಾಮದ   ಕೊಡಂಗೆ ಮನೆತನದ ಪ್ರಭಾಕರ್ ಇವರಿಗೆ ಗುತ್ತಿನ ಪಟ್ಟಿಯನ್ನು ನೀಡುವ ಕಾರ್ಯಕ್ರಮ ಜ.14  ರಂದು ಅರಮನೆಯಲ್ಲಿ ನಡೆಯಿತು.

ಅಳದಂಗಡಿ ಸೀಮೆಯ ಅರಸರಾದ  ಡಾ. ಪದ್ಮಪ್ರಸಾದ್ ಅಜಿಲ ಅವರು ಚಾವಡಿ ನಾಯಕ ರಾಜಶೇಖರ ಶೆಟ್ಟಿ ಅಳದಂಗಡಿ, ಸತ್ಯದೇವತಾ ದೇವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲ ಹಾಗೂ ವೇಣೂರು ಸೀಮೆ ದೇವಸ್ಥಾನದ ಪ್ರಧಾನ ಅರ್ಚಕ ವಿಷ್ಣುಮೂರ್ತಿ ಭಟ್, ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಸ್ಥಾನದ ಅರ್ಚಕ ಪ್ರಸಾದ್ ಭಟ್, ಸುರೇಂದ್ರ ಬಲ್ಯಾಯ ಉಪಸ್ಥಿತಿಯಲ್ಲಿ ಪಟ್ಟಿ ಪ್ರಧಾನ ಕಾರ್‍ಯಕ್ರಮ ನಡೆಸಿದರು.

ಈ  ಸಂದರ್ಭದಲ್ಲಿ ಅಳದಂಗಡಿ ನಾವೂರು ಗುತ್ತಿನ ಜಗದೀಶ್ ಹೆಗ್ಡೆ, ಪೆರಿಂಜೆ ಮಾಗಣೆ ಗುತ್ತು ಮನೆಯ ವಿನಯ ಕುಮಾರ್ ಸೇಮಿತ ಕರಿಮಣೇಲು, ಪಡ್ಡೋಡಿಗುತ್ತು ಸುಭಾಶ್ಚಂದ್ರ ರೈ , ಮಂಜುನಾಥ ಭಟ್ ಅಂತರ, ಗಂಗಾಧರ ಮಿತ್ತಮಾರು, ಶೇಡಿಮನೆ ರಾಜೇಶ್, ಧರ್ಣಪ್ಪ ಯಾನೆ ಮುತ್ತು ಪೂಜಾರಿ, ಕೋಡಿಬಾಳೆ ಕೊರಗಪ್ಪ ಪೂಜಾರಿ, ಡೆಪ್ಪುಣಿ ಸೀತಾರಾಮ ಪೂಜಾರಿ, ಮಂಜನಡ್ಕ ವಾಸು ಪೂಜಾರಿ,  ಸಹೋದರಿ ಸುಮಿತ್ರಾ, ಪತ್ನಿ ಸರೋಜಿನಿ, ಸಂತೋಷ್ ಪೂಜಾರಿ, ಕರಿಮಣೇಲು ಕೆಮಣ ಬೈಲು ವಿಜಯ ಪೂಜಾರಿ, ಮಜನಡ್ಕ ಕೊರಗಪ್ಪ ಪೂಜಾರಿ, ಪ್ರವೀಣ್ ಕೊಡಂಗೆ, ರಾಧಾಕೃಷ್ಣ  ಅಳ್ಳಂತ್ಯಾರು, ವಸಂತ ಕಾಶಿಪಟ್ನ , ಅಶೋಕ ಪೂಜಾರಿ ಕಾಶಿಪಟ್ನ, ವಿಜಯ ಪೂಜಾರಿ ಕಟ್ಟೆ, ಬಾಬು ಪೂಜಾರಿ, ಧರ್ಣಪ್ಪ ಪೂಜಾರಿ ದೊರಿಂಜ ಉಪಸ್ಥಿತರಿದ್ದರು.

ಬಡಗಕಾರಂದೂರು ಗ್ರಾಮದ ಕೊಡಂಗೆ ಮನೆತನದವರಾದ ಪ್ರಭಾಕರ್ ಕೊಡಂಗೆ ಇವರು ಡಾಕಯ್ಯ ಇವರ ಪುತ್ರರಾಗಿದ್ದು , ಗುರಿಕಾರರಾಗಿದ್ದ  ತಿಮ್ಮಯ್ಯ ಪೂಜಾರಿಯವರ ಮೊಮ್ಮಗರಾಗಿದ್ದಾರೆ.

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.