ಅಳದಂಗಡಿ: ಶ್ರೀ ಸೋಮನಾಥೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರಾಮಹೋತ್ಸವವು ಮಕರ ಸಂಕ್ರಾಂತಿ ದಿನದಂದು ಪ್ರಾರಂಭಗೊಂಡಿತು. ಜ. 20 ರಂದು ಮಹಾರಥೋತ್ಸವ ನಡೆಯಲಿದ್ದು, ಜ. .14ರಂದು ಬೆಳಗ್ಗೆ ದೇವರಲ್ಲಿ ಪ್ರಾರ್ಥನೆ ನೆರವೇರಿಸಲಾಯಿತು.
ಬಳಿಕ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಪುಣ್ಯ ಹವಾ ವಾಚನ, ಧ್ವಜರೋಹಣ, ಮಹಾಪೂಜೆ ನಡೆದು ಅನ್ನಸಂತರ್ಪಣೆ ನೆರವೇರಿತು.
ರಾತ್ರಿ 9.30 ರಿಂದ ಭಜನಾ ಸತ್ಸಂಗ, ದೇವರ ದರ್ಶನ ಬಲಿ, ವಸಂತ ಕಟ್ಟೆ ಪೂಜೆ, ಮಹಾಪೂಜೆ, ನಿತ್ಯ ಬಲಿ ನೆರವೇರಿತು.
ರಾತ್ರಿ ಕುಕ್ಕೇಡಿ ಗುತ್ತು ವತಿಯಿಂದ ವಸಂತ ಪೂಜೆ ಕಟ್ಟೆ ಪೂಜೆ ನೆರವೇರಿತು.
ಈ ವೇಳೆ ಧ್ವಜಾರೋಹಣ ಕಾರ್ಯಕ್ರಮದಲ್ಲಿ ದೇವಳದ ಅನುವಂಶಿಯ ಆಡಳಿತ ಮೊಕ್ತೇಸರರಾದ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲ, ಸತ್ಯದೇವತೆ ದೈವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ ಅಜಿಲ, ತಂತ್ರಿಕರು, ಅರ್ಚಕರು, ಊರ ಪ್ರಮುಖರು, ಮತ್ತಿತರು ಉಪಸ್ಥಿತರಿದ್ದರು.