ಪಟ್ರಮೆ: ಅನಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವವು ಜ.14 ರಂದು ಪ್ರಾರಂಭಗೊಂಡು ಜ.18 ರವರೆಗೆ ಜರುಗಲಿದೆ. ಆ ಪ್ರಯುಕ್ತ ಜ.14 ರಂದು ಬೆಳಿಗ್ಗೆ ತೋರಣ ಮುಹೂರ್ತ, ಸಂಜೆ ಧ್ವಜಾರೋಹಣ, ಸುತ್ತು ಬಲಿ, ಮಹಾಪೂಜೆ ಜರುಗಿತು.
ನಂತರ ನಡೆದ ಧಾರ್ಮಿಕ ಸಭೆಯಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ನಿತೇಶ್ ಬಲ್ಲಾಳ್ ಉಳಿಯಬೀಡು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಅಜಿತ್ ಕುಮಾರ್ ಕೊಕ್ರಾಡಿ ಧಾರ್ಮಿಕ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಪವಿತ್ರಪಾಣಿ ಶ್ರೀಧರ್ ಶಬರಾಯ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ರುಕ್ಮಯ್ಯ ಗೌಡ ನೆಕ್ಕಿಲು, ಕಾರ್ಯದರ್ಶಿ ಪುರಂದರ ಗೌಡ ಪೆರ್ಲೆ, ಪದ್ಮನಾಭ ಕಾಯಿಲ, ಸೇವಾ ಹಾಗೂ ಜಾತ್ರಾ ಮಹೋತ್ಸವ ಸಮಿತಿಯ ಸದಸ್ಯರು ಭಕ್ತಾಧಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವೀರ ಕೇಸರಿ ಅನಾರು ಪಟ್ರಮೆ ನಿರ್ಮಿಸಿದ “ಅನಾರ್ ದ ಅಪ್ಪೆ” ಧ್ವನಿ ಸುರುಳಿಯನ್ನು ಅತಿಥಿಗಳಾದ ಅಜಿತ್ ಕುಮಾರ್ ಕೊಕ್ರಾಡಿ ಬಿಡುಗಡೆಗೊಳಿಸಿದರು.