ಬೆಳ್ತಂಗಡಿ : ತುಳುನಾಡಿನ ಕಾರಣಿಕದ ಅವಳಿ ವೀರರಾದ ಸತ್ಯಸಾರಮಾನಿ “ಕಾನದ ಕಟದ” ಜನ್ಮಸ್ಥಾನದ ಶೋಧನಾ ಸಮಿತಿ ಬಂಗಾಡಿ ಬೆಳ್ತಂಗಡಿ ಇದರ ಪದಾಧಿಕಾರಿಗಳ ನಿಯೋಗ ಜ. 14.ರಂದು ಮಕರ ಸಂಕ್ರಮಣದಂದು ಪಡುಮಲೆ ನಾಗಬೆರ್ಮೆರ್ ಸ್ಥಾನಕ್ಕೆ ಭೇಟಿ ನೀಡಿ ಸತ್ಯಸಾರಮಾನಿ ಕಾನದ ಕಟದರನ್ನು ಹಾಗೂ ಅವರ ತಾಯಿ ಬೊಲ್ಲೆಯವರನ್ನು ಬಾಲ್ಯದಲ್ಲಿ ತಾಯಿಯಾಗಿ ಸಾಕಿ ಸಲಹಿದ ತಾಯಿ ದೇಯಿ ಬೈದ್ಯೆದಿ ಹಾಗೂ ಕಾಂತನ ಬೈದರ ಮನೆಯಾದ ಏರಾಜೆ ಬರ್ಕೆಯ ಕರ್ಗಲ್ಲ ತೋಟ ಹಾಗೂ ತಾಯಿ ದೇಯಿ ಬೈದ್ಯೆದಿಯವರ ಸಾನ್ನಿಧ್ಯ ಹಾಗೂ ತುಳುನಾಡಿನ ಮೂಲ “ನಾಗ ಬೆರ್ಮೆರ “ಸಾನ್ನಿಧ್ಯಕ್ಕೆ ಆಗಮಿಸಿದರು .
ವೀರರ ತಾಯಿ ಬೊಲ್ಲೆಯ ಹೆರಿಗೆಯ ಸಂದರ್ಭಲ್ಲಿ ಅವರ ಸಹೋದರರಾದ ಪಾಂಬಲಜ್ಜಿಗ ಪೂಂಬಲ -ಕರಿಯದ ನಾಗಬೆರ್ಮೆರಿಗೆ ಹರಕೆ ಹೇಳಿದ್ದರು .ಆ ಹರಕೆಯ ಫಲಶ್ರುತಿಯಾಗಿ ಅವಳಿ ವೀರರು ಜನಿಸಿದ್ದು ಜನ್ಮ ಸ್ಥಾನ ಅಭಿವೃದ್ಧಿಗಾಗಿ ಕೆಲಸ ಮಾಡುವ ಶೋಧನಾ ಸಮಿತಿಯವರು ಕಾನದ ಕಾಟದರ ಹುಟ್ಟಿಗೆ ಮೂಲವಾದ ಪಡುಮಲೆಯ ನಾಗ ಬೆರ್ಮುರು ಹಾಗೂ ಸಾಕಿಸಲಹಿದ ತಾಯಿ ದೇಯಿಬೈದೆದಿ ಹಾಗೂ ಕಾಂತನ ಬೈದರ ಆಶೀರ್ವಾದ ಪಡೆಯಲು ಬಂದಿದ್ದು ಪೂಜೆ ಮಾಡಿ ಮುಂದಿನ ಕೆಲಸಕ್ಕೆ ಅಭಿವೃದ್ಧಿ ಕಾರ್ಯಗಳಿಗೆ ಪ್ರಾರ್ಥನೆ ಸಲ್ಲಿಸಿದರು.
ಬೆಳ್ತಂಗಡಿಯ ಸತ್ಯ ಸಾರಮಾನಿ ಸಮಿತಿಯ ಮುಖಂಡರುಗಳಾದ ಬೇಬಿ ಸುವರ್ಣ, ವೆಂಕಣ್ಣ ಕೊಯ್ಯುರು, ಚಂದು ಎಲ್ , ವಸಂತ ಬಿ.ಕೆ, ನೇಮಿರಾಜ ಕಿಲ್ಲೂರು, ಸಂಜೀವ ಆರ್. ರಮೇಶ್ ಆರ್ , ಆಚುಶ್ರಿ ಬಾಂಗೇರುಇನ್ನಿತರರು ಭಾಗವಹಿಸಿದ್ದರು. ಪಡುಮಲೆ ಕೋಟಿ ಚೆನ್ನಯ್ಯ ಸಂಚಲನ, ಟ್ರಸ್ಟ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ , ಕಾರ್ಯದರ್ಶಿ ಭಗೀರಥ ಜಿ., ಪ್ರವರ್ತಕ ಚರಣ್ ಕೆ. ಇವರನ್ನು ಸ್ವಾಗತಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಉಜಿರೆಯ ಅಣ್ಣಿ ಪೂಜಾರಿ, ಸಂತೋಷ್ ಕಾಶಿಬೆಟ್ಟು, ಬಾಲಕೃಷ್ಣ ಬಾಣಜಾಲು, ಭಕ್ತರು ಹಾಜರಿದ್ದರು.