ಉಜಿರೆ : ಉಜಿರೆ ಗ್ರಾಮದ ಹಳೆಪೇಟೆ ಹಿಂದೂ ರುದ್ರಭೂಮಿ ಹಾಗೂ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ರಥಬೀದಿಗೆ ವಿಧಾನ ಪರಿಷತ್ತಿನ ಶಾಸಕ ಕೆ. ಪ್ರತಾಪ ಸಿಂಹ ನಾಯಕ್ ಇವರ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ನಿರ್ಮಾಣಗೊಂಡ ಹೈಮಾಸ್ಟ್ ದೀಪ ವನ್ನು ಪ್ರತಾಪ್ ಸಿಂಹ ನಾಯಕ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಉಜಿರೆ ಜನಾರ್ಧನ ದೇವಸ್ಥಾನದ ಮುಖ್ಯಸ್ಥ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶರತಕೃಷ್ಣ ಪಡ್ವೆಟ್ನಾಯ, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಉಷಾ ಕಾರಂತ್, ವಿನೋಬಾ ಕಾರಂತ್, ತಾ. ಪ. ಮಾಜಿ ಸದಸ್ಯ ಕೇಶವ ಭಟ್ ಅತ್ತಾಜೆ, ಸಮಾಜ ಸೇವಕ ರಾಮಚಂದ್ರ ಶೆಟ್ಟಿ, ಭರತ್ ಕುಮಾರ್, ಯಶೋಧರ ಗೌಡ, ಪ್ರಶಾಂತ್, ಚರಣ್, ಬಾಲಕೃಷ್ಣ, ನಾರಾಯಣ, ಸಂತೋಷ್ ಅತ್ತಾಜೆ ಮೊದಲಾದವರು ಉಪಸ್ಥಿತರಿದ್ದರು.