ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜಿನಲ್ಲಿ ಲಂಚ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಆಂದೋಲನ

ಬೆಳ್ತಂಗಡಿ: ಸುದ್ದಿಯ ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ ಎನ್ನುವ ಘೋಷಣೆಯೊಂದಿಗೆ ಹೊರಟು, ಸುದ್ದಿ ಆಂದೋಲನದ ಮೂಲಕ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಜ. 14 ರಂದು ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಈ  ಕಾರ್ಯಕ್ರಮದಲ್ಲಿ  ಲಂಚ ಭ್ರಷ್ಟಾಚಾರ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ ಕಾರ್ಯಕ್ರಮದಲ್ಲಿ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ. ಶಿವನಂದ  ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿದರು.

ಈ ವೇಳೆ ವಿದ್ಯಾರ್ಥಿಗಳು ಭ್ರಷ್ಟಾಚಾರದ ವಿರುದ್ದ ಘೋಷಣೆಯನ್ನು ಕೂಗಿದರು.

ವೇದಿಕೆಯಲ್ಲಿ ಸುದ್ದಿ ವ್ಯವಸ್ಥಾಪಕ ಮಂಜುನಾಥ ರೈ, ಸುದ್ದಿ ಚಾನಲ್ ವ್ಯವಸ್ಥಾಪಕ ದಾಮೋದರ್ ದೊಂಡೊಲೆ, ಪ್ರಾಂಶುಪಾಲ ಸುಕೇಶ್ ಕುಮಾರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಚನಾ ಊರುಬೈಲು, ಸುದ್ದಿ ಸಹ ವ್ಯವಸ್ಥಾಪಕ ಜಾರಪ್ಪ ಪೂಜಾರಿ, ಚಾನಲ್ ತಾಂತ್ರಿಕ ವಿಭಾಗದ ಮುಖ್ಯಸ್ಥ ಪ್ರವೀಣ್, ಸುದ್ದಿ ಬಿಡುಗಡೆ ವರದಿಗಾರರಾದ ತುಕರಾಮ ಬಿ., ಹೆರಾಲ್ಡ್ ಪಿಂಟೊ, ಉಪನ್ಯಾಸಕ ವೃಂದ, ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ  ವೇಳೆ ವಿದ್ಯಾರ್ಥಿಗಳಿಗೆ ಭ್ರಷ್ಟಾಚಾರ ನಾಮಫಲಕವನ್ನು ಹಸ್ತಾಂತರಿಸಲಾಯಿತು.

ಉಪನ್ಯಾಸಕಿ ಹೇಮಾವತಿ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.