ಅಳದಂಗಡಿ ಶ್ರೀ‌ಮಹಾಗಣಪತಿ ದೇವಸ್ಥಾನದ ಗರ್ಭಗುಡಿಗೆ ತಾಮ್ರದ ಹೊದಿಕೆಯ ಸೇವಾ ಕೂಪನ್ ಬಿಡುಗಡೆ

ಅಳದಂಗಡಿ : ಪುನರ್ ನಿರ್ಮಾಣಗೊಳ್ಳುತ್ತಿರು ಅಳದಂಗಡಿಯ ಶ್ರೀ‌ಮಹಾಗಣಪತಿ ದೇವಸ್ಥಾನದ ಗರ್ಭಗುಡಿಗೆ ತಾಮ್ರದ ಹೊದಿಕೆಯ ಸೇವಾ ಕೂಪನ್ ಬಿಡುಗಡೆ ಕಾರ್ಯಕ್ರಮ ಜ. 14 ರಂದು ಬಾಲಾಲಯದಲ್ಲಿ ನೇರವೇರಿತು.

ದೇವಳದ ಸ್ಥಾಪಕ ವಂಶಸ್ಥರಾದ ಹೇಮಂತ ರಾವ್ ಯರ್ಡೂರು, ಅಳದಂಗಡಿ ವಲಯ ಅರಣ್ಯಾಧಿಕಾರಿ ಸುರೇಶ್ ಗೌಡ್ರು, ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಶ್ರೀನಿವಾಸ ರಾವ್ ದೋರಿಂಜೆ,‌ ಉದ್ಯಮಿಗಳಾದ ಪ್ರಭಾಕರ ಹೆಗ್ಡೆ ಕೋಡಿ ಹಾಗೂ ಗುರುಪ್ರಸಾದ್ ಕೊಳಂಜಿರೋಡಿ ಕೂಪನ್‌ಗಳನ್ನು ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭ ಗ್ರಾ.ಪಂ.ಉಪಾಧ್ಯಕ್ಷ ಹರೀಶ್ ಆಚಾರ್ಯ, ಅಳದಂಗಡಿ ಸಿ.ಎ.ಬ್ಯಾಂಕ್ ಅಧ್ಯಕ್ಷ ಶಿವಭಟ್ ಕಟ್ಟೂರು, ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಕಾರ್ಯನಿರ್ವಹಣಾಧಿಕಾರಿ ಮೀರಾ, ಪಿ.ಡಿ.ಒ.ಗಳಾದ ಗಾಯತ್ರಿ, ಪ್ರಕಾಶ ಶೆಟ್ಟಿ ನೊಚ್ಚ, ಸ್ಥಳೀಯರಾದ ಸಂಜೀವ ಪೂಜಾರಿ ಕೊಡಂಗೆ, ಶಶಿಧರ ಎ., ನಿರಂಜನ ಜೋಶಿ, ಪ್ರಸನ್ನ ಹೆಬ್ಬಾರ್ ಫಂಡಿಜೆ, ಸೀತಾರಾಮ ಪೂಜಾರಿ ಡೆಪ್ಪುಣಿ, ಆನಂದ ಪೂಜಾರಿ ಬರಯ, ಶ್ರೀರಂಗ ಮಯ್ಯ,ದೇವಿಪ್ರಸಾದ ಶೆಟ್ಟಿ, ಮೋಹನದಾಸ, ಪ್ರಶಾಂತ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಶಶಿಧರ ಡೋಂಗ್ರೆ, ಸಂಘಟನಾ ಕಾರ್ಯದರ್ಶಿ ಕೆ.ನಾರಾಯಣ ರಾವ್ ಕಾಪನಡಕ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಂಗಾಧರ ಮಿತ್ತಮಾರು, ಪ್ರಧಾನ ಅರ್ಚಕ ಸೋಮನಾಥ ಮಯ್ಯ,ಸಮಿತಿ ಸದಸ್ಯರುಗಳಾದ ಜಗನ್ನಾಥ ಶೆಟ್ಟಿ, ಅನಿಲ್ ಕುಮಾರ್, ಸುರೇಶ್ ಶೆಟ್ಟಿ, ಸದಾನಂದ ಮಲೆಕುಡಿಯ,  ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ    ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.