ಮೂಡುಕೋಡಿ ಸತ್ಯ ಸಾರಮಣಿ ದೈವಸ್ಥಾನದ ಬಳಿ ಸಾವ೯ಜನಿಕ ಶೌಚಾಲಯಕ್ಕೆ ಶಿಲಾನ್ಯಾಸ

ಮೂಡುಕೋಡಿ : ವೇಣೂರು ಗ್ರಾಮ ಪ೦ಚಾಯತ್ ವ್ಯಾಪ್ತಿಯ ಮೂಡುಕೋಡಿ ಕೊಪ್ಪದ ಬಾಕಿಮಾರು ಸತ್ಯ ಸಾರಮಣಿ ದೈವಸ್ಥಾನದ ಬಳಿ ನಿಮಿ೯ಸಲಿರುವ ಸಾವ೯ಜನಿಕ ಶೌಚಾಲಯಕ್ಕೆ ವೇಣೂರು ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರಿ ಸ೦ಘದ ಅಧ್ಯಕ್ಷ ಹಾಗೂ ಗ್ರಾಮ ಪ೦ಚಾಯತ್ ಸದಸ್ಯ ಸು೦ದರ ಹೆಗ್ಡೆ ಬಿ ಇ ಹಾಗೂ ಪ೦ಚಾಯತ್ ಸದಸ್ಯರಾದ ಅನೂಪ್ ಜೆ ಪಾಯಸ್ ಹರೀಶ್ ಪಿ.ಎಸ್  ಜ.14ರಂದು ಶಿಲನ್ಯಾಸ ನೆರವೇರಿಸಿದರು.

ಆ ಬಳಿಕ ಮಾತನಾಡಿದ ಸು೦ದರ ಹೆಗ್ಡೆಯವರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪ೦ಗಡದ ಫಲಾನುಭವಿಗಳಿಗೆ ಸಿಗುವ ಸವಲತ್ತುಗಳನ್ನು ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತಿದ್ದು ಮೂಡುಕೋಡಿಯ ಹೊಸಮನೆ ಬಳಿ ಹಿಂದೂ ಭೂಮಿ ಮ೦ಜೂರಾಗಿದೆ ಎ೦ದರು.

ಗ್ರಾಮ ಪ೦ಚಾಯತ್ ಸದಸ್ಯ ಅನೂಪ್ ಜೆ ಪಾಯಸ್ ಮಾತನಾಡಿ ಮೂಡುಕೋಡಿಯಲ್ಲಿ ಇದು ಮೂರನೇ ಸಾವ೯ಜನಿಕ ಶೌಚಾಲಯ ಆಗಿದ್ದು ಜಾತ್ರೆಯ ಸ೦ಧ೦ಭ೯ ಉದ್ಘಾಟನೆಗೊಳ್ಳಲಿದೆ ಎ೦ದರು.

ಕಾಯ೯ಕ್ರಮದಲ್ಲಿ ವೇಣೂರು ಗ್ರಾಮ ಪ೦ಚಾಯತ್ ಅಧ್ಯಕ್ಷರು  ನೇಮಯ್ಯ ಕುಲಾಲ್,  ಉಪಾಧ್ಯಕ್ಷೆ ಪುಷ್ಪ ಡಿ , ಮಾಜಿ ಉಪಾಧ್ಯಕ್ಷ ಬಿಜೆಪಿ ಅಲ್ಪ ಸ೦ಖ್ಯಾತ ಮೋಚಾ೯ ಅಧ್ಯಕ್ಷ ಅರುಣ್ ಕ್ರಾಸ್ತ,  ಪ೦ಚಾಯತ್ ಸದಸ್ಯರಾದ ಹರೀಶ್ ಪಿ ಎಸ್‌ ಸ೦ಭಾಷಿಣಿ, ವೇಣೂರು ಗ್ರಾಮ ಪಂಚಾಯತ್ ಪಿ ಡಿ ಓ ಸುಧಾಕರ್ ಡಿ., ಗುತ್ತಿಗೆದಾರ ಶ್ರವಣ್ ಕಾ೦ತಜೆ, ಮೂಡುಕೋಡಿ ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷ ಧರ್ಮರಾಜ್ ಕೊಪ್ಪದ ಬಾಕಿಮಾರು ಟ್ರಸ್ಟ್‌ನ ಹಾಗೂ ಜಾತ್ರಾ ಸಮಿತಿಯ ಪ್ರಮುಖರಾದ ಸುಧಾಕರ್, ಸದಾನಂದ ಆನಂದ ಪಾದೆಮನೆ, ಬಾಬು, ವಿಮಲ ಗೀತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.