ವಾಣಿ ಪ.ಪೂ ಕಾಲೇಜಿನಲ್ಲಿ ಲಂಚ ಭ್ರಷ್ಟಾಚಾರ ವಿರೋಧಿಸಿ ಜನಜಾಗೃತಿ ಆಂದೋಲನ

ಬೆಳ್ತಂಗಡಿ:  ಸುದ್ದಿಯ ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ,ಉತ್ತಮ ಸೇವೆಗೆ ಪುರಸ್ಕಾರ ಎನ್ನುವ ಘೋಷಣೆಯೊಂದಿಗೆ  ಹೊರಟು , ಸುದ್ದಿ ಆಂದೋಲನದ ಮೂಲಕ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಜ. 14 ರಂದು  ವಾಣಿ  ಪದವಿ ಪೂರ್ವ ಕಾಲೇಜಿನಲ್ಲಿ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಈ  ಕಾರ್ಯಕ್ರಮದಲ್ಲಿ  ಲಂಚ ಭ್ರಷ್ಟಾಚಾರ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ ಕಾರ್ಯಕ್ರಮ ದಲ್ಲಿ ಡಾ.ಯು.ಪಿ.ಶಿವನಾಂದರು  ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿದರು.

ಈ ವೇಳೆ ವಿದ್ಯಾರ್ಥಿಗಳು ಭ್ರಷ್ಟಾಚಾರದ ವಿರುದ್ದ ಘೋಷಣೆಯನ್ನು ಕೂಗಿದರು. ವೇದಿಕೆಯಲ್ಲಿ   ಪ್ರಾಂಶುಪಾಲರು ಯದುಪತಿ ಗೌಡ , ಉಪಪ್ರಾಂಶುಪಾಲರು  ವಿಷ್ಣುಪ್ರಕಾಶ್, ಉಪನ್ಯಾಸಕಿ ಮೀನಾಕ್ಷಿ ಉಪಸ್ಥಿತರಿದ್ದರು.

ಈ  ವೇಳೆ ವಿದ್ಯಾರ್ಥಿಗಳಿಗೆ ಭ್ರಷ್ಟಾಚಾರ ನಾಮಫಲಕವನ್ನು ಹಸ್ತಾಂತರಿಸಲಾಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.