ಮುಂಡಾಜೆ ಪದವಿಪೂರ್ವ ಕಾಲೇಜಿನಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ

ಮುಂಡಾಜೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದ.ಕ., ತಾಲೂಕು ಆರೋಗ್ಯ ಕಛೇರಿ ಬೆಳ್ತಂಗಡಿ, ಎಬಿ ಶೆಟ್ಟಿ ದಂತವೈದ್ಯಕೀಯ ಕಾಲೇಜು ದೇರಳಕಟ್ಟೆ, ಸೇವಾಭಾರತಿ ರಿ.ಕನ್ಯಾಡಿ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ರಿ ಇದರ ಅಧೀನಕ್ಕೊಳಪಟ್ಟ ಮುಂಡಾಜೆ ಶಿಕ್ಷಣ ಶಿಕ್ಷಣ ಸಂಸ್ಥೆಗಳು, ಚಿರಂಜೀವಿ ಯುವಕ ಮಂಡಲ ಕಾನರ್ಪ, ಶ್ರೀ ದುರ್ಗಾ ಶಕ್ತಿ ಮಹಿಳಾ ಸಂಘ ಕಾನರ್ಪ, ಮಹಮ್ಮಾಯಿ ಸೇವಾ ಸ್ಪಂದನ ಕಡಿರುದ್ಯಾವರ,ಗ್ರಾಮ ವಿಕಾಸ ಸಮಿತಿ ಮುಂಡಾಜೆ, ರಾಷ್ಟ್ರೀಯ ಸೇವಾ ಯೋಜನೆ ಘಟಕ ಮುಂಡಾಜೆ ಪದವಿಪೂರ್ವ ಕಾಲೇಜು ಮುಂಡಾಜೆ, ಇವುಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಉಚಿತ ದಂತ ಚಿಕಿತ್ಸಾ ಶಿಬಿರವು ನಡೆಯಿತು.

ಮುಂಡಾಜೆ ಪದವಿಪೂರ್ವ ಕಾಲೇಜಿನ ಸಭಾಭವನದಲ್ಲಿ ನಡೆದ ಈ ಕಾರ್ಯಕ್ರಮವನ್ನು NOHP ನೋಡಲ್ ಆಫೀಸರ್ ಡಾ. ಲವೀನ ಉದ್ಘಾಟಿಸಿದರು. ಮುಂಡಾಜೆ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯ ಹಾಗೂ ಗ್ರಾಮ ವಿಕಾಸ ಸಮಿತಿ ಮುಂಡಾಜೆ ಇದರ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವಿನಾಯಕ ರಾವ್ ಕನ್ಯಾಡಿ ,ಪ್ರಾಂಶುಪಾಲೆ ಜಾಲಿ ಡಿಸೋಜಾ, ಡಾ. ಶಿಲ್ಪ ಜನಾರ್ಧನ್, ದೀಕ್ಷಿತ್, ಭಾರತಿ ಫಡ್ಕೆ, ವೈದ್ಯಾಧಿಕಾರಿಗಳು,  ಜನಾರ್ಧನ,  ಸುಭಾಸ್ ಚಂದ್ರ ಜೈನ್, ಕನ್ನಡ ಉಪನ್ಯಾಸಕಿ ವಸಂತಿ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.