ಗುರುವಾಯನಕೆರೆ: ಸುದ್ದಿಯ ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ,ಉತ್ತಮ ಸೇವೆಗೆ ಪುರಸ್ಕಾರ ಎನ್ನುವ ದ್ಯೇಯದೊಂದಿಗೆ ಹೊರಟು , ಸುದ್ದಿ ಆಂದೋಲನದ ಮೂಲಕ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಜ. 14 ರಂದು ಎಕ್ಸೆಲ್ ಪದವಿ ಪೂರ್ವ ಕಾಲೇಜು ಗುರುವಾಯನಕೆರೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸುದ್ದಿ ಸಂಪಾದಕರು ಡಾ.ಯು.ಪಿ ಶಿವಾನಂದ್, ಭ್ರಷ್ಟಾಚಾರವನ್ನು ಹೇಗೆ ನಿರ್ಮೂಲನೆ ಮಾಡಬಹುದೆಂದು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.
ಈ ವೇಳೆ ವಿದ್ಯಾರ್ಥಿಗಳು ಭ್ರಷ್ಟಾಚಾರದ ವಿರುದ್ದ ಘೋಷಣೆಯನ್ನು ಕೂಗಿದರು. ವೇದಿಕೆಯಲ್ಲಿ ಚೇರ್ ಮನ್ ಸುಮಂತ್ ಕುಮಾರ್ ಜೈನ್ ಉಪಸ್ಥಿತರಿದ್ದರು.