ಗುರುವಾಯನಕೆರೆ ಧಾರ್ಮಿಕ ಶ್ರದ್ಧಾ ಕೇಂದ್ರದ ಸ್ವಚ್ಛತಾ ಕಾರ್ಯಕ್ರಮ


ಮೋಗ್ರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಣಿಯೂರು ವಲಯದ ಮೋಗ್ರು ಒಕ್ಕೂಟ ಹಾಗೂ ಶೌರ್ಯ ವಿಪತ್ತು ನಿರ್ವಹಣೆ ಘಟಕದ ವತಿಯಿಂದ, ಧಾರ್ಮಿಕ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಹಾಗೂ ಜಾತ್ರೋತ್ಸವದ ಪ್ರಯುಕ್ತ ಮೂವರು ದೈವಗಳ ದೇವಸ್ಥಾನ ಮುಗೇರಡ್ಕ ಮೋಗ್ರು ಇಲ್ಲಿ  ಜ 13 ರಂದು  ಸ್ವಚ್ಛತಾ ಶ್ರಮದಾನವನ್ನುದೈವಸ್ಥಾನದ ಸುತ್ತಲ ಆವರಣ ಹಾಗೂ ಒಳಾoಗಣವನ್ನು ಸ್ವಚ್ಛಗೊಳಿಸಲಾಯಿತು.

ಸ್ವಚ್ಛತಾ ಕಾರ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಣಿಯೂರು ವಲಯದ ಮೋಗ್ರು ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು, ವಿಪತ್ತು ನಿರ್ವಹಣೆ ಘಟಕದ ಸಂಯೋಜಕಿ ಹಾಗೂ ಸೇವಾಪ್ರತಿನಿಧಿ ಚಂದ್ರಕಲಾ, ಸ್ವಯಂ ಸೇವಕರಾದ ವಿನಯಚಂದ್ರ ಮೋಗ್ರು, ಸುಂದರ ಪೈರೋಟ್ಟು ಹಾಗೂ ಊರವರು ಶ್ರಮದಾನದಲ್ಲಿ ಭಾಗವಹಿಸಿದರು.

ಆಡಳಿತ ಮಂಡಳಿಯ ಶ್ರೀ ಮನೋಹರ್ ಅಂತರ ಹಾಗೂ ಚಂದ್ರಹಾಸ ದೇವಸ್ಯ ಶ್ರಮದಾನದ ಬಗ್ಗೆ  ಮೆಚ್ಚುಗೆ ವ್ಯಕ್ತಪಡಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.