ಮುಂಡೂರು: ಸುಮಾರು 800 ವರ್ಷಗಳ ಇತಿಹಾಸವುಳ್ಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮುಂಡೂರಿನಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ಜರುಗುತ್ತಿದೆ.
ಜ. 13ರಂದು ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಸಾಂಸೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಕೆ.ವಸಂತ ಬಂಗೇರ ವಹಿಸಿದ್ದರು. ಅನುವಂಶೀಯ ಅರ್ಚಕರು ಹರಿನಾರಾಯಣ ದಾಸ ಅಸ್ರಣ್ಣರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಶಾರದಾ ಅಂಧರ ಗೀತಗಾಯನ ಕಲಾ ಸಂಘ ಶೃಂಗೇರಿ ಇವರಿಂದ ಭಕ್ತಿರಸಮಂಜರಿ, ಹಾಗೂ ಕು. ಅದಿತಿ ಎಂ.ಎಸ್. ಮತ್ತು ಅನನ್ಯ ಎಂ.ಎಸ್ ಇವರಿಂದ ನೃತ್ಯ ವರ್ಣ ರಾಗಂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
.ಈ ಸಂದರ್ಭದಲ್ಲಿ ಪಡುಬಿದ್ರಿ ಬೀಡು ರತ್ನಾಕರರಾಜ ಅರಸು ಕಿನ್ಯಕ್ಕ ಬಲ್ಲಾಳರು,ಬೆಂಗಳೂರು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ರೇಣುಕಾ ಪ್ರಸಾದ್ ಕೆ.ವಿ, ದ.ಕ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ,ಬೆಂಗಳೂರು ಉದ್ಯಮಿ ದಿವಾಕರ ಮೂಲ್ಯ, ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಶ್ರೀ ಕ್ಷೇತ್ರ ನಾಗಕಲ್ಲುರ್ಟಿ ದೈವಸ್ಥಾನ ಮಂಗಳಗಿರಿ ಮುಂಡೂರು ಆಡಳಿತ ಮೊಕ್ತೇಸರ ರಾಜೀವ, ಬಂಟ್ವಾಳ ಪ್ರಾದೇಶಿಕ ಸಾರಿಗೆ ಅಧಿಕಾರಿ ಚರಣ್ ಕುರ್ತೋಡಿ,ಉದ್ಯಮಿ ಸಂತೋಷ್ ಕುಮಾರ್ ಜೈನ್ ವೀರ ನಿವಾಸ,ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮುನಿರಾಜ ಅಜ್ರಿ, ಶ್ರೀ ದುರ್ಗಾ ಹಾಲು ಉತ್ಪಾದಕರ ಸಹಕಾರಿ ಸಂಘ ಮುಂಡೂರು ಇದರ ಅಧ್ಯಕ್ಷ ಯಾದವ ಕುಲಾಲ್, ಮುಂಡೂರು ಶಾರದಾಂಬ ಯುವಕ ಮಂಡಲದ ಅಧ್ಯಕ್ಷ ರಮಾನಂದ ಸಾಲಿಯಾನ್, ಮುಂಡೂರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಜೈನ್, ಮುಂಡೂರು ಜ್ಯೋತಿ ಯುವತಿ ಮಂಡಲ ಅಧ್ಯಕ್ಷೆ ಸುಶೀಲಾ ಶೆಟ್ಟಿ,ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ|ಎಂ.ಎಂ.ದಯಾಕರ್ ಭಟ್ ಉಜಿರೆ, ಕಾರ್ಯಾಧ್ಯಕ್ಷ ಯೋಗೀಶ್ ಕುಮಾರ್ ಕೆ.ಎಸ್, ಪ್ರದಾನ ಕಾರ್ಯದರ್ಶಿ ರಾಜೀವ ಸಾಲಿಯಾನ್, ಕೋಶಾಧಿಕಾರಿ ಕಿಶೋರ್ ಹೆಗ್ಡೆ,ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್,ಪ್ರ.ಆರ್ಚಕ ಅರವಿಂದ ಭಟ್ ಉಪಸ್ಥಿತರಿದ್ದರು.
ಯುವ ಸಾಹಿತಿ ಚಂದ್ರಹಾಸ ಬಳಂಜ ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಕಲಶೋತ್ಸವ ಸಮತಿಯ ಪದಾಧಿಕಾರಿಗಳು ಸಹಕರಿಸಿದರು.
ಕಾರ್ಯಕ್ರಮದಲ್ಲಿ ದೇವಸ್ಥಾನಕ್ಕೆ ವಿವಿಧ ರೀತಿಯಲ್ಲಿ ಸಹಕರಿಸಿದ ಹಲವರನ್ನು ಗೌರವಿಸಲಾಯಿತು