ಶಿಶಿಲ ಕಾರೆಗುಡ್ಡೆ ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಕ್ಷೇತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಂದ ವರದಿಗಳು ಸತ್ಯಕ್ಕೆ ದೂರ

ಪತ್ರಿಕಾಗೋಷ್ಠಿ

ಬೆಳ್ತಂಗಡಿ: ಶಿಶಿಲ ಪೇಟೆ ಸಮೀಪದ ಕಾರೆಗುಡ್ಡೆ ಗಣೇಶ ಮುಗೇರವರ ಜಮೀನಿನಲ್ಲಿ ಕಳೆದ 4 ವರ್ಷಗಳಿಂದ ಕಟ್ಟೆ ಕಟ್ಟಿ ಜೀರ್ಣೋದ್ಧಾರ ಮಾಡಿ ಪೂಜೆಸುತ್ತಾ ಬಂದಿರುವ ಕೊರಗಜ್ಜ ದೈವಸ್ಥಾನದ ಬಗ್ಗೆ ಸಾಮಾಜಿಕ ಜಾಲತಾಣ ಮತ್ತು ಪತ್ರಿಕೆಗಳಲ್ಲಿ ಬಂದ ವರದಿ ಸತ್ಯಕ್ಕೆ ದೂರವಾಗಿರುತ್ತದೆ ಎಂದು ಕ್ಷೇತ್ರದ ಭಕ್ತ ಕರುಣಾಕರ ಮತ್ತು ದರ್ಶನ ಪಾತ್ರಿ ಗಣೇಶ ಮುಗೇರ ಸ್ಪಷ್ಟ ಪಡಿಸಿದರು. ಅವರು ಜ.13 ರಂದು ಬೆಳ್ತಂಗಡಿ ಶ್ರೀ ಧ.ಮಂ. ಕಲಾಭವನದ ಪಿನಾಕಿ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟ ಪಡಿಸಿದರು.

ಕಾರೆಗುಡ್ಡೆ ಕೊರಗಜ್ಜ ಸನ್ನಿಧಿಯಲ್ಲಿ ಸಂಕ್ರಾತಿ ದಿನದಂದು ಸ್ಥಳೀಯರಿಗೆ ಸಮಸ್ಯೆ ಬಂದಾಗ ಈ ದೈವದ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಎಷ್ಟೋ ಜನರ ಕಷ್ಟ ನಿವಾರಣೆಯಾಗಿರುತ್ತದೆ. ಈ ಕ್ಷೇತ್ರದ ಬಗ್ಗೆ ಊರಿಂದ ಊರಿಗೆ ನಂಬಿಕೆ ಮೇಲೆ ಹಾಗೂ ಜನರ ಕಷ್ಟ ನಿವಾರಣೆಯಾಗಿರುವುದರಿಂದ ಪ್ರಚಾರವು ಜಾಸ್ತಿಯಾದ ಹಿನ್ನಲೆಯಲ್ಲಿ ಅಗೇಲು ಸೇವೆ ಹೆಚ್ಚುವರಿ ಪ್ರತಿ ಆದಿತ್ಯವಾರದಂದು ಕೊರಗಜ್ಜನ ದರ್ಶನ ನುಡಿ, ಅಗೇಲು ಸೇವೆ ಹಾಗೂ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯುತ್ತಾ ಬರುತ್ತಿದೆ.

ಈ ದರ್ಶನದಲ್ಲಿ ಸ್ವಯಂ ಸೇವಕರಾಗಿ ಕೊರಗಜ್ಜನ ನುಡಿಯ ಪ್ರಕಾರ ಶಿಶಿಲ ಗ್ರಾಮದ ಎಲ್ಲಾ ಜಾತಿಯ 15 ಜನರು ಸೇವೆಯನ್ನು ಒದಗಿಸುತ್ತಾ ಬರುತ್ತಿದ್ದಾರೆ. ಈ ಕ್ಷೇತ್ರದ ಬಗ್ಗೆ ಇಷ್ಟರವರೆಗೆ ಯಾರು ಯಾವುದೇ ಆರೋಪ ಮಾಡಿರುವುದಿಲ್ಲ. ಪ್ರಸುತ್ತ ಈ ಆರೋಪದಿಂದ ನಂಬಿರುವ ಭಕ್ತರಿಗೆ ತುಂಬ ನೋವುಂಟು ಮಾಡಿರುತ್ತದೆ. ಈ ಹಿನ್ನಲೆಯಲ್ಲಿ ಭಕ್ತರು ಒಟ್ಟು ಸೇರಿ ಈ ಕ್ಷೇತ್ರಕ್ಕೆ ಅವಮಾನ ಮಾಡಿರುವವರಿಗೆ ತಕ್ಕ ಶಿಕ್ಷೆ ಆಗಲಿ ಎಂದು ಜ.14 ರಂದು ಶಿಶಿಲೇಶ್ವರ ದೇವಸ್ಥಾನದಿಂದ ಕಾರೆಗುಡ್ಡೆ ಕೊರಗಜ್ಜ ದೈವಸ್ಥಾನದವರೆಗೆ ಪಾದಯಾತ್ರೆ ಮೂಲಕ ಬಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿದ್ದೇವೆ.

 ಪತ್ರಿಕಾಗೋಷ್ಠಿಯಲ್ಲಿ ಕಾರೆಗುಡ್ಡೆ ಕ್ಷೇತ್ರದ ಭಕ್ತರು ಹಾಗೂ ಶಿಶಿಲ ಗ್ರಾ.ಪಂ. ಅಧ್ಯಕ್ಷ ಸಂದೀಪ್ ಗೌಡ, ಗುಳಿಗ ದೈವದ ಪಾತ್ರಿ ವಿಶ್ವನಾಥ, ದೈವದ ಸೇವಕರಾದ ಮಾಧವ ಮತ್ತು ಶೀನಪ್ಪ ಗೌಡ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.