ಮುಂಡೂರು: ಬ್ರಹ್ಮಕಲಶೋತ್ಸವ ಸಂಭ್ರಮ.ಹಸಿರುವಾಣಿ ಹೊರಕಾಣಿಕೆ, ಮಹಾದ್ವಾರ ಉದ್ಘಾಟನೆ,

ಮುಂಡೂರು: ಮುಂಡೂರು, ಮೇಲಂತಬೆಟ್ಟು, ಸವಣಾಲು, ಕರಂಬಾರು ಗ್ರಾಮಗಳಿಗೆ ಅನಾದಿಕಾಲದಿಂದಲೂ ಗ್ರಾಮ ದೇವಸ್ಥಾನವಾಗಿ ಭಕ್ತಜನ ಅನುಗ್ರಹದಾಯಕವಾಗಿ ನೆಲೆಯಾಗಿರುವ
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮುಂಡೂರಿನಲ್ಲಿ ಜ.೧೨ ಅಷ್ಟಬಂಧ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ಜರುಗುತ್ತಿದ್ದು, ಅಷ್ಟ ಬಂಧ ಬ್ರಹ್ಮಕಲಶೋತ್ಸವದ ಎರಡನೇ ದಿನವಾದ ಜ.13 ರಂದು ದೇವಾಲಯದ ಮಹಾದ್ವಾರ ಉದ್ಘಾಟನೆ ಹಾಗೂ ಹಸಿರು ಹೊರೆಕಾಣಿಕೆಯ ಉದ್ಘಾಟನೆ ನಡೆಯಿತು.

ಬದ್ಯಾರುವಿನಲ್ಲಿ ಕೇರಿಯರ್ ಕುಟುಂಬದಿಂದ ನಿರ್ಮಿಸಿದ ಮಹಾದ್ವಾರದ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ನೆರವೇರಿಸಿದರು.ದೇವಸ್ಥಾನದ ಹತ್ತಿರದಲ್ಲಿ ನಿರ್ಮಿಸಿದ ಮಹೇಶ್ ಕುಮಾರ್ ನಡಕ್ಕರ ದ್ವಾರವನ್ನು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಉದ್ಘಾಟಿಸಿ, ಶ್ರೀ ಕ್ಷೇತ್ರ ಮಂಗಳಗಿರಿ ಮುಂಡೂರು ಇದರ ಧರ್ಮದರ್ಶಿ ರಾಜೀವ ಸಾಲ್ಯಾನ್‌ರವರು ಹಸಿರು ಹೊರಕಾಣಿಕೆಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ದಯಾಕರ್,ಕಾರ್ಯಧ್ಯಕ್ಷ ಯೋಗೀಶ್ ಕುಮಾರ್ ನಡಕ್ಕರ,ಕಾರ್ಯದರ್ಶಿ ರಾಜೀವ್ ಸಾಲಿಯಾನ್ ಮುಂಡೂರು, ಪ್ರಮುಖರಾದ ಸಂತೋಷ್ ಕುಮಾರ್ ಮುಂಡೂರು, ಎಂ.ಅರವಿಂದ ಭಟ್ ಪ್ರಧಾನ ಅರ್ಚಕರು, ಕೋಶಾಧಿಕಾರಿ ಕಿಶೋರ್ ಹೆಗ್ಡೆ,ಪ್ರಮುಖರಾದ ಸಂತೋಷ್ ಕುಮಾರ್ ಕಾಪಿನಡ್ಕ,ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಯೋಜನಾಧಿಕಾರಿ ಯಶವಂತ್, ಸಂತೋಷ್ ಕುಮಾರ್ ಜೈನ್ ಪಡಂಗಡಿ,ನವೀನ್ ಕೆ ಸಾಮಾನಿ,ಸುಂದರ ಪೂಜಾರಿ ಕೇರಿಯಾರು,ಯೋಜನೆಯ ಮೆಲ್ವಿಚಾರಕ ದಿನೇಶ್, ಮಲ್ಲಿಕಾ, ಮೀನಾಕ್ಷಿ ಪಡಂಗಡಿ, ಸಂತೋಷ್ ಹೆಗ್ಡೆ ಮಾರುತಿ ನಿಲಯ, ಅಮರನಾಥ ಹೆಗ್ಡೆ, ಆನಂದ ಸಾಲಿಯಾನ್ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರು, ಪಧಾಧಿಕಾರಿಗಳು, ಊರವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.