ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ಬೆಳಕು ಪ್ರತಿಷ್ಠಾನದಿಂದ ಗೌರವಾಭಿವಂದನೆ ಕಾರ್ಯಕ್ರಮ

ಬೆಳ್ತಂಗಡಿ: ಗೌರವ ಹಾಗೂ ಅಭಿಮಾನದ ಜತೆ ಸಮಾಜಸೇವೆ ಮಾಡುವ ಮಂದಿ ಅಭಿನಂದನೆಗೆ ಅರ್ಹರು, ಇಂಥವರನ್ನು ಗುರುತಿಸುವಲ್ಲಿ ಬೆಳಕು ಪ್ರತಿಷ್ಠಾನ ಮುಂಚೂಣಿಯಲ್ಲಿದೆ ಎಂದು ವಿ.ಹಿಂ.ಪ. ಪುತ್ತೂರು ಇದರ ಜಿಲ್ಲಾ ಕಾರ್ಯಧ್ಯಕ್ಷ ಭಾಸ್ಕರ ಧರ್ಮಸ್ಥಳ ಹೇಳಿದರು.

ಅವರು ಜ  12 ರಂದು   ಬೆಳ್ತಂಗಡಿಯ ಬೆಳಕು ಪ್ರತಿಷ್ಠಾನದ ವತಿಯಿಂದ ನಡೆದ ಮುಂಡಾಜೆಯ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ಜರಗಿದ 2022ನೇ ಸಾಲಿನ  ಗೌರವಾಭಿವಂದನೆಕಾರ್ಯಕ್ರಮದಲ್ಲಿ ಮಾತನಾಡಿದರು.

ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಮುಂಡಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ಉಜಿರೆ ಗ್ರಾ.ಪಂ ಅಧ್ಯಕ್ಷೆ ಪುಷ್ಪಾವತಿ ಆರ್.ಶೆಟ್ಟಿ, ಮುಂಡಾಜೆ ಗ್ರಾಪಂ ಅಧ್ಯಕ್ಷೆ ರಂಜಿನಿ , ಉಪನ್ಯಾಸಕ ಪುರುಷೋತ್ತಮ ಶೆಟ್ಟಿ,  ಉಪಸ್ಥಿತರಿದ್ದರು.

ಈ  ಸಂದರ್ಭದಲ್ಲಿ ಹಿರಿಯ ಮುತ್ಸದ್ದಿ ಅಡೂರು ವೆಂಕಟ್ರಾಯ, ಆರ್.ಎಸ್.ಎಸ್.ನ ಹಿರಿಯ ಕಾರ್ಯಕರ್ತ ಎಂ. ಕೆಂಪಯ್ಯ ಮಡಿವಾಳ ನಿಡಿಗಲ್ ಅವರಿಗೆ ಗೌರಾವಾಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ   ಕೆ ಕೊರಗಪ್ಪ ನಾಯ್ಕ, ರಾಘವ ಕಲ್ಮಂಜ, ರಂಜಿನಿ ರವಿ, ಅಗರಿ ರಾಮಣ್ಣ ಶೆಟ್ಟಿ, ಹಿರಿಯ ಉದ್ಯಮಿ ಮೋಹನ್ ಶೆಟ್ಟಿಗಾರ್, ಸಮಾಜಸೇವಕರು ಸುಧಾಕರ ಗೌಡ, ಗೋಪಾಲಕೃಷ್ಣ ಉಜಿರೆ,ಗುರುಪ್ರಸಾದ್ ಪೆರ್ಲ, ಮಧುಕರ ರಾವ್ ಕಕ್ಕಿಂಜೆ, ಮುಂಡಾಜೆಯ ಆಶಾ ಕಾರ್ಯಕರ್ತೆಯರಾದ ಚಂದ್ರಾವತಿ ಉಮೇಶ್, ಗಾಯತ್ರಿ ರೈ, ಜಯಂತಿ, ಬಿ.ಕೆ. ಶಶಿ ಇವರನ್ನೂ ಅಭಿನಂದಿಸಲಾಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.