ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ 16ನೇ ಶಾಖೆಯು ಸಿದ್ದಕಟ್ಟೆಯ ವಿ-ಮ್ಯಾಕ್ಸ್ಟವರ್ಸ್ನ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಂಡಿತು.
ಶಾಖೆಯನ್ನು ಉದ್ಘಾಟಿಸಿದ ಸಂಘದ ನಿರ್ದೇಶಕ, ಮಾಜಿ ಶಾಸಕ ಕೆ.ವಸಂತ ಬಂಗೇರ ಮಾತನಾಡಿ ಅಧ್ಯಕ್ಷರು ಸೇರಿದಂತೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಸೇವೆಯಿಂದ ಸಂಘವು ಬಲಿಷ್ಠವಾಗಿ ಬೆಳೆದಿದೆ.ಮುಂದೆ ಶೀಘ್ರ 2 ಶಾಖೆಗಳನ್ನು ಹೊಂದುವ ಗುರಿ ಇದೆ ಎಂದರು.
ಸಂಘದ ಅಧ್ಯಕ್ಷ ಎನ್ ಪದ್ಮನಾಭ ಮಾಣಿಂಜ ಅಧ್ಯಕ್ಷತೆ ವಹಿಸಿದ್ದರು. ಸಂಗಬೆಟ್ಟು ಗ್ರಾ.ಪಂ ಅಧ್ಯಕ್ಷ ಸತೀಶ್ ಪೂಜಾರಿ ಆಲಕ್ಕೆ ಭದ್ರತಾ ಕೋಶ, ಸಿದ್ದಕಟ್ಟೆ ಸಹಕಾರಿ ವ್ಯ.ಸಂಘದ ಅಧಕ್ಷ ಪ್ರಭಾಕರ ಪ್ರಭು ಗಣಕಯಂತ್ರ ವ್ಯವಸ್ಥೆಯನ್ನು ಉದ್ಘಾಟಿಸಿದರು.ಸಿದ್ದಕಟ್ಟೆ ಬ್ರಹಶ್ರಿ ನಾರಾಯಣ ಗುರು ಸಮಾಜ ಸೇವಾ ಸಂಘದ ಗೌರವಾಧ್ಯ ಗೋಪಾಲ ಬಂಗೇರ ನಿರಖು ಠೀವಣಿ ಪತ್ರ ಹಾಗೂ ದ.ಕ ಜಿಲ್ಲಾ ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷ ಸಂಜೀವ ಪೂಜಾರಿ ಕುಚ್ಚಿಗುಡ್ಡೆ ಉಳಿತಾಯ ಖಾತೆ ಪುಸ್ತಕ ವಿತರಿಸಿದರು.
ಆರಂಬೋಡಿ ಗ್ರಾ.ಪಂ ಅಧಕ್ಷೆ ವಿಜಯಾ ರಮೇಶ ಕುಂಜಾಡಿ, ಕುಕ್ಕಿಪಾಡಿ ಗ್ರಾ.ಪಂ ಅಧಕ್ಷೆ ಸುಜಾತಾ ಆರ್ .ಪೂಜಾರಿ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷ ರಾಘವೇಂದ್ರ ಭಟ್ ,ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಯೋಗೀಶ್ ಕೈರೋಡಿ, ಪೂಂಜಾ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರತ್ನಕುಮಾರ ಚೌಟ, ಹನ್ನೆರಡುಕವಲು ಶ್ರಿ ಗಣೇಶ್ ಮಂದಿರದ ಶ್ರೀ ಸತ್ಯನಾರಾಯಣ ಸೇವಾ ಸಮಿತಿಯ ಅಧ್ಯಕ್ಷ ಸತೀಶ್ ಪೂಜಾರಿ, ಸಿದ್ದಕಟ್ಟೆ ಚರ್ಚ್ ಪರಿಪಾಲನಾ ಮಂಡಳಿಯ ಉಪಾಧ್ಯಕ್ಷ ಮೈಕಲ್ ಡಿಕೋಸ್ತ, ರಾಜ್ಯ ಗೇರು ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಜಗದೀಶ್ ಕೊಯಿಲ, , ರಾಷ್ಟ್ರಪ್ರಶಸ್ತಿ ಪುರಸ್ಕ್ರತ ಶಿಕ್ಷಕ ರಮೇಶ್ ನಾಯಕ್ ರಾಯಿ, ಸಿದ್ದಕಟ್ಟೆ ಬ್ರಹ್ಮಶ್ರೀ ನಾರಾಯಣಗುರು ಸ. ಸೇ. ಸಂಘದ ಅಧ್ಯಕ್ಷ ಯೋಗೀಶ್ ಆಚಾರ್ಯ,ಸಿದ್ದಕಟ್ಟೆಯ ವೈದ್ಯ ಡಾ .ಪ್ರಭಾಚಂದ್ರ, ಕೋರ್ಯಾರು ಶ್ರೀ ಮಹಾಮ್ಮಾಯಿ ದೇವಸ್ಥಾನದ ಗುರಿಕಾರ ಗೋಪಾಲ ಗೌಡ, ಜಿ.ಪಂ ಮಾಜಿ ಉಪಾಧ್ಯಕ್ಷ ಪಿ. ಧರಣೇಂದ್ರ ಕುಮಾರ್, ಆರಂಬೋಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಎಚ್. ಪ್ರಭಾಕರ ಪೂಜಾರಿ ಹುಲಿಮೇರು, ಕಟ್ಟಡದ ಮಾಲಕ ವಿಕ್ಟರ್ ಮ್ಯಾಕ್ಸಿಂ ಮೋರಸ್, ಸಂಗಬೆಟ್ಟು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಶೆಟ್ಟಿಗಾರ, ಸಂಘದ ಉಪಾಧ್ಯಕ್ಷ ದಾಮೋದರ್ ಸಾಲಿಯಾನ್, ನಿರ್ದೇಶಕರಾದ ಭಗೀರಥ ಜಿ. ಸಂಜೀವ ಪೂಜಾರಿ, ಕೆ.ಪಿ ದಿವಾಕರ, ಜನಾರ್ದನ ಪೂಜಾರಿ, ಜಗದೀಶ್ಚಂದ್ರ ಡಿ.ಕೆ ಚಂದ್ರಶೇಖರ್, ಸಿದ್ದಕಟ್ಟೆ ಶಾಖೆಯ ವ್ಯವಸ್ಥಾಪಕ ಸೂರಜ್ ಜೆ. ಸಾಲ್ಯಾನ್ ಉಪಸ್ಥಿತರಿದ್ದರು.
ಪುರೋಹಿತ ಸೀತಾರಾಮ ಶಾಂತಿ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ವಿಶೇಷಾಧಿಕಾರಿ ಎಂ.ಮೋನಪ್ಪ ಪೂಜಾರಿ ಕಂಡೆತ್ಯಾರು ಪ್ರಸ್ತಾವನೆಗೈದರು. ಸಿ.ಇ.ಒ ಅಶ್ವತ್ಥ್ ಕುಮಾರ ಸ್ವಾಗತಿಸಿ ನಿರೂಪಿಸಿದರು. ನಿರ್ದೇಶಕ ಸತೀಶ ಕಾಶಿಪಟ್ಣ ವಂದಿಸಿದರು.