ಗುರಿಪಳ್ಳ ಶಾಲಾ ಮುಖ್ಯ ಶಿಕ್ಷಕಿ ಮಂಜುಳಾರಿಗೆ ಸಾವಿತ್ರಿ ಭಾಯಿ ಫುಲೆ ಪ್ರಶಸ್ತಿ

ಉಜಿರೆ : ರಾಣೇಬೆನ್ನೂರು ಬಳ್ಳಾರಿ ಕಲ್ಯಾಣ ಮಂಟಪದಲ್ಲಿ ಜ.3 ರಂದು ನಡೆದ ಸಾವಿತ್ರಿ ಶೈಕ್ಷಣಿಕ ಕಾರ್ಯಗಾರ ಭಾಯಿ ಫುಲೆ ಪ್ರಶಸ್ತಿ ಹಾಗೂ ಮಾತೆ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆಯಲ್ಲಿ ಗುರಿಪಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಮಂಜುಳಾ ಜೆ . ಟಿ. ಯವರಿಗೆ ರಾಣಿ ಬೆನ್ನೂರು ಶಾಸಕರು ಅರುಣ್ ಕುಮಾರ್ ದಂಪತಿಗಳು ಸೇರಿ ರಾಜ್ಯ ಮಟ್ಟದ ಸಾವಿತ್ರಿಭಾಯಿಫುಲೆ ಪ್ರಶಸ್ತಿ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಡಾ.ಲತಾ ಎಸ್ ಮುಳ್ಳೂರು ಸಂಸ್ಥಾಪಕಿ ರಾಜ್ಯಾಧ್ಯಕ್ಷರು, ಕರ್ನಾಟಕ ಸಾವಿತ್ರಿಭಾಯಿ ಫುಲೆ ಶಿಕ್ಷಕಿಯರ ಸಂಘ ರಾಜ್ಯ ಘಟಕ ಧಾರವಾಡ, ಶ್ರೀಮತಿ ಜ್ಯೋತಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶ್ರೀಮತಿ ಸಂಧ್ಯಾರಾಣಿ ಕರ್ನಾಟಕ ಸಾವಿತ್ರಿಭಾಯಿ ಫುಲೆ ಶಿಕ್ಷಕಿಯರ ಸಂಘ ಹಾವೇರಿ ಅಧ್ಯಕ್ಷೆ, ಶ್ರೀಮತಿ ಸರೋಜಿನಿ ಭರಮಗೌಡ್ರ ಕರ್ನಾಟಕ ಸಾವಿತ್ರಿಭಾಯಿ ಫುಲೆ ಶಿಕ್ಷಕಿಯರ ಸಂಘ ತಾಲೂಕು ಘಟಕ ರಾಣಿಬೆನ್ನೂರು ಅಧ್ಯಕ್ಷರು ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.