ಜ.4 ರಿಂದ ಪಾರೆಂಕಿ ಮಾರಿಕಾಂಬಾ ದೇವಿ ಸನ್ನಿದಾನದಲ್ಲಿ ಬದಲಾವಣೆಯಾದ ಕಾರ್ಯಕ್ರಮ

ಪಾರೆಂಕಿ: ಸರಕಾರ ರಾತ್ರಿ ಕರ್ಫ್ಯೂ ವಿಧಿಸಿರುವ ಹಿನ್ನೆಲೆಯಲ್ಲಿ ಪಾರೆಂಕಿ ಮಾರಿಕಾಂಬಾ ದೇವಿ ಸನ್ನಿದಾನದಲ್ಲಿ ಜ 4 ರಿಂದ ಜರುಗುವ ಚತುರ್ದಶ ಪ್ರತಿಷ್ಠಾ ವರ್ಧಂತುತ್ಸವದ ಪ್ರಯುಕ್ತ ಮುಂಜಾನೆ ನಡೆಯುವ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಆದರೆ ಸಾಯಂಕಾಲ ನಡೆಯುವ ಕಾರ್ಯಕ್ರಮದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ.
ಸಂಜೆ 4 ಗಂಟೆಗೆ ಭಂಡಾರ ಬಂದು,6 ಗಂಟೆಗೆ ಭೂತದ ಕೋಲ ಆರಂಭವಾಗಿ,6ರಿಂದ 9 ಗಂಟೆಯವರೆಗೆ ಯಕ್ಷಗಾನ ಬಯಲಾಟ ನಡೆಯಲಿದ್ದು, ರಾತ್ರಿ ಗಂಟೆ 8ಕ್ಕೆ ಮಹಾಪೂಜೆ ದರ್ಶನ ನಡೆದು, ರಾತ್ರಿ 10 ಗಂಟೆಗೆ ಎಲ್ಲಾ ಕಾರ್ಯಕ್ರಮಗಳು ಕೊನೆಗೊಳ್ಳಲಿದೆ. ಭಕ್ತಾಧಿಗಳು ಈ ಬದಲಾವನೆಯನ್ನು ಗಮನಿಸಿ ಸರ್ವ ರೀತಿಯ ಸಹಕಾರವನ್ನು ನೀಡಬೇಕು ಎಂದು ಆಡಳಿತ ಮಂಡಳಿಯ ಪರವಾಗಿ ಡಾಕ್ಟರ್ ಕೆ ಎಸ್ ಬಲ್ಲಾಳ್ ರವರು ತಿಳಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.