ನ್ಯಾಯಾವಾದಿ ಮನೋಹರ್ ಕುಮಾರ್‌ರವರ ವಕೀಲರ ಕಚೇರಿ ಸ್ಥಳಾಂತರಗೊಂಡು ಶುಭಾರಂಭ

ಬೆಳ್ತಂಗಡಿ: ಬೆಳ್ತಂಗಡಿ ಮೂರು ಮಾರ್ಗದ ಬಳಿ ಇರುವ ಅನುರಾಗ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಚರಿಸುತ್ತಿದ್ದ ನ್ಯಾಯವಾದಿ ಮನೋಹರ ಕುಮಾರ್ ಎ ರವರ ಕಚೇರಿಯು ಕ್ಯಾಂಪ್ಕೋ ರಸ್ತೆಯ ಮಹಿಳಾ ಮಂಡಲಗಳ ಒಕ್ಕೂಟದ ವಾಣಿಜ್ಯ ಸಂಕೀರ್ಣಕ್ಕೆ ಡಿ.31 ರಂದು ಸ್ಥಳಾಂತರಗೊಂಡು ಶುಭಾರಂಭಗೊಂಡಿತು.

ಮಾಜಿ ಶಾಸಕ ವಸಂತ ಬಂಗೇರರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಹಿರಿಯ ವಕೀಲರು,  ವಿಧಾನಪರಿಷತ್   ಶಾಸಕ ಪ್ರತಾಪ್ ಸಿಂಹ ನಾಯಕ್ ಶುಭಹಾರೈಸಿದರು. ಈ ವೇಳೆಯಲ್ಲಿ ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಶಾಸಕ ಕೆ.ಹರೀಶ್ ಕುಮಾರ್, ತಾಲೂಕು ವಕಿಲರ ಸಂಘದ ಅಧ್ಯಕ್ಷ ಪ್ರಸಾದ್ ಕೆ.ಎಸ್, ವಕಿಲರಾದ ಬಿ.ಕೆ ಧನಂಜಯ್ ರಾವ್, ಶ್ರೀ ಗುರುದೇವ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜ, ಬೆಳ್ತಂಗಡಿ ಎ.ಪಿ.ಎಂ.ಸಿ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ, ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಶಾಂತ ಬಂಗೇರ, ಹಿರಿಯ ವಕೀಲರಾದ ನೇಮಿರಾಜ ಶೆಟ್ಟಿ, ವಕೀಲರು ಭಗೀರಥ, ಶ್ರೀ ಗುರುದೇವ ವಿವಿದೋದ್ದೇಶ  ಸಂಘದ ವಿಶೇಷ ಅಧಿಕಾರಿ ಮೋನಪ್ಪ ಪೂಜಾರಿ ಕಂಡೆತ್ಯಾರು, ನಿವೃತ್ತ ಪ್ರಾಂಶುಪಾಲ ಕೃಷ್ಣಪ್ಪ ಪೂಜಾರಿ, ಮನೋಹರ್ ರವರ ತಂದೆ ಜಿನ್ನಪ್ಪ ಪೂಜಾರಿ,  ಉಪಸ್ಥಿತರಿದ್ದರು.

ವಕೀಲರಾದ ಮನೋಹರ್ ಕುಮಾರ್ ಮತ್ತು ಶ್ರೀಮತಿ ನಯನ ಮನೋಹರ್, ವಕೀಲರಾದ ಶೋಭಾ ಎಸ್ ಆಚಾರ್ಯ, ಸಂದೀಪ್ ಡಿಸೋಜಾ ಆಗಮಿಸಿದ ಗಣ್ಯರನ್ನು ಸ್ವಾಗತಿಸಿ ಗೌರವಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.